ವೀರಾಜಪೇಟೆ, ಜೂ. 10: ಮೈತಾಡಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಎಂ. ನಂದ ಅವರ ಮನೆಯಲ್ಲಿ ಸೀತೆ ಎಂಬ ಹಸುವು ಅವಳಿ ಕರುಗಳಿಗೆ ಜನ್ಮ ನೀಡಿದೆ. ಇಲ್ಲಿನ ಪಶುವೈದ್ಯಾಧಿಕಾರಿ ಬಸವರಾಜು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ಮಾಡಿ, ಎರಡು ಕರುಗಳು ಆರೋಗ್ಯವಾಗಿವೆ ಎಂದು ತಿಳಿಸಿದ್ದಾರೆ.
ನಂದ ಅವರು ಪ್ರಾಣಿ ಪ್ರಿಯರಾಗಿದ್ದು ತಮ್ಮ ಮನೆಯಲ್ಲಿ 5ಕ್ಕೂ ಹೆಚ್ಚು ಹಸುಗಳನ್ನು ಸಾಕಿದ್ದು, ಪಾರಿವಾಳ ಮತ್ತು ವಿವಿಧ ತಳಿಯ ಕೋಳಿಗಳನ್ನು ಪೋಷಿಸುತ್ತಿದ್ದಾರೆ.
ಸೀತೆ ಹಸು ಮೊದಲ ಬಾರಿಯ ಗರ್ಭಿಣಿಯಲ್ಲಿಯೇ ಅವಳಿ ಕರುಗಳಿಗೆ ಜನ್ಮ ನೀಡಿರುವದು ಸಂತಸ ತಂದಿದೆ ಎಂದು ನಂದ ಅವರು ಪ್ರತಿಕ್ರಿಯಿಸಿದ್ದಾರೆ.