ಮಡಿಕೇರಿ, ಜೂ.10 : ಸಮುದಾಯ ಆಧಾರಿತ ಪಕ್ಷವಾಗಿಯೇ ಬೆಳೆದು ಬಂದಿರುವ ಕಾಂಗ್ರೆಸ್ನ್ನು ಸಂಘಟನೆ ಆಧಾರಿತ ಪಕ್ಷವನ್ನಾಗಿ ಕಟ್ಟಿ ಬೆಳೆÉಸುವ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ (ಐಎನ್ಟಿಯುಸಿ) ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಕಾರ್ಮಿಕರ ಹಿತದೊಂದಿಗೆ ಪಕ್ಷಕ್ಕೆ ಬಲ ತುಂಬುವದೇ ಈ ಸಂಘಟನೆಯ ಉದ್ದೇಶವಾಗಿದೆ ಎಂದು ಐಎನ್ಟಿಯುಸಿ ರಾಜ್ಯ ಉಪಾಧ್ಯಕ್ಷ ಎನ್.ಎಂ.ಮುತ್ತಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1947 ರ ಅವಧಿಯಲ್ಲಿ ಸ್ಥಾಪನೆಯಾದ ಐಎನ್ಟಿಯುಸಿ ಸಂಘÀಟನೆಯನ್ನು ಮತ್ತೆ ಶಕ್ತಿಯುತವಾಗಿ ಕಟ್ಟಿ ಬೆಳೆಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿಸುವ ಪಣ ತೊಡಲಾಗಿದೆ. ರಾಷ್ಟ್ರ ವ್ಯಾಪಿ ಸಂಘಟನೆಯು 3.43 ಕೋಟಿ ಸದಸ್ಯರುಗಳನ್ನು ಹೊಂದಿದ್ದು, ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಸಂಘಟನೆಯ ಸದಸ್ಯತ್ವ ಕಳೆÉದ ಎರಡು ವರ್ಷಗಳ ಅವಧಿಯಲ್ಲಿ 75 ಸಾವಿರಗಳಷ್ಟಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಮಿಕರು ಎಂದರೆ ಕಾರ್ಖಾನೆಗಳಲ್ಲಿ ದುಡಿಯುವವರು ಎನ್ನುವ ಸೀಮಿತ ಚೌಕಟ್ಟು ಪ್ರಸ್ತುತ ಬದಲಾಗಿದ್ದು, ಸರಕಾರ ಗುರುತು ಹಚ್ಚಿರುವ 145 ವಿಭಿನ್ನ ಕೆಲಸಗಳಲ್ಲಿ ತೊಡಗಿರುವವರನ್ನು ಕಾರ್ಮಿಕ ವ್ಯಾಪ್ತಿಗೆ ಒಳಪಡಿಸಲಾಗಿದೆ. ಕಾರ್ಮಿಕರೆನಿಸಿಕೊಂಡವರು ಕಾರ್ಮಿಕ ಹಕ್ಕುಗಳನ್ನು ಮತ್ತು ಸೌಲಭ್ಯಗಳನ್ನು ಹೊಂದಿಕೊಳ್ಳಲು ಅರ್ಹರಾಗಿರುತ್ತಾರೆ. ಕೊಡಗು ಜಿಲ್ಲೆಯಲ್ಲಿ ಕೈಗಾರಿಕೆಗಳ ಬದಲಾಗಿ ತೋಟಗಳಲ್ಲಿ ದುಡಿಯುವ ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವದರಿಂದ ಇಲ್ಲಿ ಸಂಘಟನೆಯನ್ನು ಕಟ್ಟುವದು ತ್ರಾಸದಾಯಕವಾದ ಕಾರ್ಯವಾಗಿದೆ. ಆದರೂ ಐಎನ್ಟಿಯುಸಿ ಸಂಘÀಟನೆ ಕಳೆದ ಎರಡು ವರ್ಷಗಳಿಂದ ಕಾರ್ಮಿಕರ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದೆ ಎಂದು ಮುತ್ತಪ್ಪ ತಿಳಿಸಿದರು.
ಜಿಲ್ಲಾಧ್ಯಕ್ಷರ ಆಯ್ಕೆ : ಕೊಡಗು ಜಿಲ್ಲಾ ಕಾಂಗ್ರೆಸ್ನ ನೂತನ ಅಧ್ಯಕ್ಷರನ್ನು ಮುಂದಿನ ಮಂಗಳವಾರ ಇಲ್ಲವೆ ಬುಧವಾರ ಘೋಷಿಸುವ ಸಾಧ್ಯತೆ ಇದೆ. ಯಾರೇ ಅಧ್ಯಕ್ಷರಾದರು ಅವರನ್ನು ಬೆಂಬಲಿಸುವದಾಗಿ ಸ್ಪಷ್ಟಪಡಿಸಿದ ಮುತ್ತಪ್ಪ, ಪ್ರಸ್ತುತ ನಿಧಾನ ಗತಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆಯೊಂದಿಗೆ ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದರು.
ಐಎನ್ಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷರಾದ ಟಿ.ಪಿ.ಹಮೀದ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಂಘÀಟನೆಯ ಸದಸ್ಯತ್ವ ಪಡೆದುಕೊಂಡಿರುವವರಲ್ಲಿ 7500 ಮಂದಿ ಕಟ್ಟಡ ಕಾರ್ಮಿಕರೇ ಆಗಿದ್ದಾರೆ ಎಂದು ತಿಳಿಸಿದರು. ಪ್ರಸ್ತುತ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗ ಯೋಜನೆಯಡಿ ಜಾಬ್ ಕಾರ್ಡ್ ಪಡೆದುಕೊಂಡಿರುವವರು ಕೂಡ ಕಾರ್ಮಿಕರಾಗಿ ಪರಿಗಣಿತÀರಾಗುತ್ತಾರೆ. ಕಾರ್ಮಿಕರ ಅಭ್ಯುದಯಕ್ಕಾಗಿ ಕಾರ್ಮಿಕ ಮಂಡಳಿಯಲ್ಲಿರುವ 4500 ಕೋಟಿ ನಿಧಿಯ ಸೌಲಭ್ಯವÀನ್ನು ಈ ಎಲ್ಲಾ ಕಾರ್ಮಿಕರು ಹೊಂದಿಕೊಳ್ಳು ವಂತಾಗಬೇಕೆಂದು ಅಭಿಪ್ರಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಐಎನ್ಟಿಯುಸಿ ಸಂಘÀಟನೆಯ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್, ಪದಾಧಿಕಾರಿಗಳಾದ ಅಜ್ಜಳ್ಳಿ ರವಿ, ಹೊಸಬೀಡು ಹೂವಯ್ಯ ಹಾಗೂ ಅಶ್ರಫ್ ಉಪಸ್ಥಿತರಿದ್ದರು.