ವೀರಾಜಪೇಟೆ, ಜೂ. 10: ಕೈಕೇರಿ ಕಿರಿಯ ಪ್ರಾಥಮಿಕ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಗೋಣಿಕೊಪ್ಪಲಿನ ಕಲ್ಕಿ ಭಗವಾನ್ ಮಾನವ ಸೇವಾ ಸಮಿತಿಯಿಂದ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ಕಲ್ಕಿ ಭಗವಾನ್ ಮಾನವ ಸೇವಾ ಸಮಿತಿಯ ಸ್ವಯಂ ಸೇವಕಿ ತಾರಾಜೀ, ಕಲ್ಕಿ ಮಾನವ ಸೇವಾ ಸಮಿತಿ ಭಗವಾನ್‍ರ ಸ್ಮರಣೆ, ಭಜನೆ ಪ್ರಾರ್ಥನೆಯ ಧಾರ್ಮಿಕ ಸೇವೆಯೊಂದಿಗೆ ಸಮಾಜ ಸೇವೆಗೂ ಆದ್ಯತೆ ನೀಡುತ್ತಿದೆ. ಇಂದಿನ ಸಮಾಜದ ಬಡ ಮಕ್ಕಳು ವಿದ್ಯಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಿ ಜೀವನದಲ್ಲಿ ಉಜ್ವಲ ಭವಿಷ್ಯ ಹೊಂದಲು ಈ ಸೇವೆಯನ್ನು ಹಮ್ಮಿಕೊಂಡಿದೆ ಎಂದರು.

ಶಾಲೆಯ ಸುಮಾರು 50 ವiಕ್ಕಳಿಗೆ ಪುಸ್ತಕ ವಿತರಣೆ ಮಾಡಿ ನಂತರ ಕೈಕೇರಿಯಲ್ಲಿರುವ ಕಲ್ಕಿ ಭಗವಾನ್ ಮಂದಿರದಲ್ಲಿ ಲತಾ ಪೂಣಚ್ಚ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ಧ್ಯಾನ, ಪ್ರಾರ್ಥನೆ, ಭಜನೆ ಜರುಗಿತು.

ಕಾರ್ಯಕ್ರಮದಲ್ಲಿ ಕಲ್ಕಿ ಮಾನವ ಸೇವಾ ಸಮಿತಿಯ ಸ್ವಯಂ ಸೇವಕರಾದ ಪೊಯ್ಯೆಟೀರ ಡಾಲು, ಟಿಪ್ಪು ಮಾದಯ್ಯ, ನವೀನ್, ಮಾಚಯ್ಯ, ಕುಸುವi ಕುಶಾಲಪ್ಪ, ನಮಿತಾ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಶಾಲೆಯ ಮುಖ್ಯ ಶಿಕ್ಷಕಿ ಪಿ.ಡಿ. ಅನ್ನಮ್ಮ ಹಾಗೂ ಶಿಕ್ಷಕಿ ಎ.ಡಿ. ಜಯಂತಿ ಹಾಜರಿದ್ದರು.