ರಾಜ್ಯ ಸರಕಾರವು ಬ್ರಹ್ಮಗಿರಿ ಸೂಕ್ಷ್ಮ ಪರಿಸರ ವಲಯ ಪ್ರದೇಶದಲ್ಲಿರುವಂತಹ ನೀರಿನ ಕೊಳಗಳು, ಬಂಡೆಕಲ್ಲುಗಳು, ಜಲಪಾತಗಳು, ಅಂತರ್ಜಲಗಳು, ಗುಹೆಗಳು ಮುಂತಾದವುಗಳನ್ನು ಗುರುತಿಸಿ ಅವುಗಳನ್ನು ಪ್ರಾಕೃತಿಕ ಪಾರಂಪರಿಕ ತಾಣಗಳಾಗಿ ಸಂರಕ್ಷಿಸಿ ಮಾಸ್ಟರ್ ಪ್ಲಾನ್‍ನಲ್ಲಿ ಅಳವಡಿಸಬೇಕು. ಇದಲ್ಲದೆ ಸಾಮಾನ್ಯ, ಐತಿಹಾಸಿಕ, ಪುರಾತನ, ಕಲಾತ್ಮಕ, ಪೌರಾಣಿಕ ಹಾಗೂ ಸಾಂಸ್ಕøತಿಕ ಹಿನ್ನೆಲೆಯುಳ್ಳ ಕಟ್ಟಡಗಳನ್ನು ಗುರುತಿಸಿ ಪಾರಂಪರಿಕ ಸಂರಕ್ಷಣಾ ಪ್ರದೇಶಗಳಾಗಿ ಯೋಜನೆಯಲ್ಲಿ ಅಳವಡಿಸಬೇಕು. ಸೂಕ್ಷ್ಮ ಪರಿಸರ ತಾಣದಲ್ಲಿ 1980 ರ ಪರಿಸರ ಸಂರಕ್ಷಣಾ ಕಾಯ್ದೆ ಬಳಿಕ ನಡೆದ ತಿದ್ದುಪಡಿ ಕಾಯ್ದೆ ಹಾಗೂ 2000 ಇಸವಿಯ ಮಾಲಿನ್ಯ ನಿಯಂತ್ರಣಾ ಕಾನೂನುಗಳ ಅನ್ವಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಶಬ್ದ ಮಾಲಿನ್ಯವನ್ನು ನಿಯಂತ್ರಿಸಬೇಕು.
ಅಲ್ಲದೆ 1981 ರ ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ ಅನ್ವಯ ಪರಿಸರ ತಾಣದಲ್ಲಿ ಮುನ್ನೆಚ್ಚರಿಕೆ ಕೈಗೊಂಡು ವಾಯು ಮಾಲಿನ್ಯವನ್ನು ನಿಯಂತ್ರಿಸಬೇಕು. 1986 ರ ಪರಿಸರ ಸಂರಕ್ಷಣಾ ಕಾಯ್ದೆ ಅನ್ವಯ ಬಾಹ್ಯವಾಗಿ ವಿಸರ್ಜಿಸುವ ಮಾಲಿನ್ಯ ವಸ್ತುಗಳನ್ನು ಕಾನೂನು ಕ್ರಮದಲ್ಲಿಯೇ ನಿರ್ವಹಿಸಬೇಕು, ಅಲ್ಲದೆ ಘನ ತ್ಯಾಜ್ಯಗಳನ್ನು 2016 ರ ಘನ ತ್ಯಾಜ್ಯ ನಿರ್ವಹಣಾ ಕಾನೂನಿನಂತೆ ನಿರ್ವಹಿಸಬೇಕು. ಸಾವಯವ ರಹಿತವಾದ ತ್ಯಾಜ್ಯ ವಸ್ತುಗಳನ್ನು ಪರಿಸರ ತಾಣದ ಹೊರಭಾಗದ ಪ್ರದೇಶದಲ್ಲಿ ವಿಸರ್ಜಿಸಬೇಕು. ಘನ ತ್ಯಾಜ್ಯ ಪದಾರ್ಥಗಳನ್ನು ಸುಡಬಾರದು ಹಾಗೂ ಪರಿಸರ ತಾಣದಲ್ಲಿ ಎಸೆಯಬಾದರು. ಜೀವ ವೈದ್ಯಕೀಯ ತ್ಯಾಜ್ಯ ಪದಾರ್ಥಗಳನ್ನು 2916 ರ ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಕಾನೂನಿನ ನಿರ್ಬಂಧದ ಅನ್ವಯ ಪರಿಸರ ತಾಣದಲ್ಲಿ ವಿಸರ್ಜಿಸಬಹುದು.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯನ್ನು ಪರಿಸರ ತಾಣದಲ್ಲಿ 2016 ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಕಾನೂನಿನಂತೆ ಮಾಡಬಹುದು. ನಿರ್ಮಾಣ ಮತ್ತು ಕೆಡಹುವಿಕೆ ಸಂದರ್ಭದಲ್ಲಿನ ತ್ಯಾಜ್ಯ ವಸ್ತುಗಳ ನಿರ್ವಹಣೆಯನ್ನು 2016 ರ ಸಂಬಂಧಿತ ಕಾಯ್ದೆ ಅನ್ವಯ ನಡೆಸಬೇಕು. ಪರಿಸರ ಸಂಬಂಧೀ ತ್ಯಾಜ್ಯಗಳನ್ನು ಕೂಡ 2016 ರ ಇದಕ್ಕೆ ಸಂಬಂಧಿಸಿದ ಕಾನೂನಿನ ಅನ್ವಯ ನಿರ್ವಹಿಸಬೇಕು. ಪರಿಸರ ತಾಣದಲ್ಲಿ ವಾಹನಗಳ ಸಂಚಾರಕ್ಕೂ ನಿಯಮವನ್ನು ರೂಪಿಸಲಾಗಿದೆ. ಈ ಬಗ್ಗೆ ರಾಜ್ಯ ಸರಕಾರ ಮತ್ತು ನಿರ್ವಹಣಾ ಸಮಿತಿಗಳು ಸಂದರ್ಭಾನುಸಾರ ಸಂಬಂಧಿತ ಕಾಯ್ದೆ ಅನ್ವಯ ಸೂಚನೆಗಳನ್ನು ನೀಡುತ್ತಿರಬೇಕು. ವಾಹನಗಳ ಮಾಲಿನ್ಯವನ್ನು ತಡೆಗಟ್ಟಲು ಹಾಗೂ ಮುಂಜಾಗರೂತ ಕ್ರಮ ಕೈಗೊಳ್ಳಲು ಸಂಬಂಧಿತ ಕಾಯ್ದೆಯನ್ನು ಪಾಲಿಸಬೇಕು. ಸಿ.ಎನ್.ಜಿ., ಎಲ್.ಪಿ.ಜಿ. ಮೊದಲಾದ ಇಂಧನಗಳನ್ನು ಬಳಸಿ ಪರಿಸರ ಶುದ್ಧತೆಯನ್ನು ಕಾಪಾಡಬೇಕು. ಈ ತಾಣಗಳಲ್ಲಿ ಮಾಲಿನ್ಯ ರಹಿತ ಕೈಗಾರಿಕೆಗಳಿಗೆ ಮಾತ್ರ ಅವಕಾಶವಿದೆ. ಅಲ್ಲದೆ ಮಾಲಿನ್ಯ ರಹಿತ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬಹುದು.
ಗಿರಿ ತಟಗಳಲ್ಲಿಯೂ ನಿರ್ಬಂಧ
ರಾಜ್ಯ ಸರಕಾರದ ಯೋಜನೆಯಲ್ಲಿ ಗಿರಿ ತಟಗಳಲ್ಲಿ ಯಾವದೇ ನಿರ್ಮಾಣಕ್ಕೆ ಅವಕಾಶವಿಲ್ಲದಿರುವದನ್ನು ಖಚಿತವಾಗಿ ನಮೂದಿಸಬೇಕು. ಈ ಎಲ್ಲಾ ನಿರ್ಬಂಧಗಳೊಂದಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬಹುದು.
ನಾಳಿನ ಸಂಚಿಕೆ (ಪರಿಸರ ತಾಣದಲ್ಲಿ ನಿಷೇಧಿತ-ನಿರ್ಬಂಧಿತ ಚಟುವಟಿಕೆಗಳು)
? ‘‘ಚಕ್ರವರ್ತಿ’’