ಕೂಡಿಗೆ, ಜೂ. 12: ಸಮುದಾಯ ಹಾಗೂ ಸಮಾಜದ ಒಳಿತಿಗಾಗಿ ತಾವೆಲ್ಲರೂ ಕೈಜೋಡಿಸಿದಾಗ ಮಾತ್ರ ಸ್ವಚ್ಛಂದ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ. ಜೊತೆಗೆ ಸ್ವಾಭಿಮಾನದ ಜೀವನವನ್ನು ಕಾಯ್ದುಕೊಳ್ಳಬಹು ದಾಗಿದೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೊಡಗು ಜಿಲ್ಲೆಯ ಗಡಿಭಾಗವಾದ ಶಿರಂಗಾಲ ಗ್ರಾ.ಪಂ ವ್ಯಾಪ್ತಿಯ ಮಣಜೂರು ಗ್ರಾಮದಲ್ಲಿ ನಿರ್ಮಿಸಲಾದ ಸಾಂಸ್ಕøತಿಕ ಭವನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ, ನಮ್ಮತನವನ್ನು ನಾವು ಮರೆಯದೆ ಸಮಾಜಕ್ಕೆ ಕೈಲಾದಷ್ಟು ಸೇವೆಯನ್ನು ಮಾಡಬೇಕಾಗುತ್ತದೆ ಎಂದರು.

ಮಣಜೂರಿನಂತಹ ಒಂದು ಪುಟ್ಟ ಗ್ರಾಮಕ್ಕೆ ವಿಶಾಲವಾದ ಒಂದು ಸಾಂಸ್ಕøತಿಕ ಭವನವನ್ನು ಇಂದು ಸಮರ್ಪಣೆ ಮಾಡಲಾಗಿದೆ. ಇದೊಂದು ಸಾಂಸ್ಕøತಿಕ ಚಟುವಟಿಕೆಗೆ ಮತ್ತು ತರಬೇತಿ ನಡೆಸುವ ಕೇಂದ್ರವಾಗಲಿ ಎಂದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ

(ಮೊದಲ ಪುಟದಿಂದ) ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್ ಮಾತನಾಡಿ, ಇಂತಹ ಒಂದು ಗ್ರಾಮೀಣ ಭಾಗದಲ್ಲಿ ವಿಶಾಲವಾದ ಭವನವನ್ನು ನಿರ್ಮಿಸಿದ್ದು, ಇದನ್ನು ಎಲರೂ ಬಳಕೆ ಮಾಡಿಕೊಳ್ಳಬೇಕು. ಹಾಗೂ ಕಲೆ, ಸಂಸ್ಕøತಿ, ಸಾಹಿತ್ಯ ಪರವಾದಂತಹ ನಿರಂತರ ಚಟುವಟಿಕೆಗಳು ನಡೆದರೆ ಸೌಹಾರ್ದತೆ, ಸಹಬಾಳ್ವೆ, ಸಮಾನತೆಗಾಗಿ ಸಂಸ್ಕøತಿಯನ್ನು ಉಳಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಆರ್.ಶ್ರೀನಿವಾಸ್ ಮಾತನಾಡಿ, ಮಣಜೂರಿನಲ್ಲಿ ಒಂದು ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಈ ಸೃಷ್ಟಿಗೆ ಕಾರಣರಾದ ಶಾಸಕರಿಗೆ ಚಿರಋಣಿಯಾಗಿದ್ದೇವೆ ಎಂದರು.

ತೊರೆನೂರು ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ.ಎಸ್.ಕೃಷ್ಣೇಗೌಡ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿರಂಗಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎನ್.ಎಸ್.ರಮೇಶ್ ಮಾತನಾಡಿ ಸಾರ್ವಜನಿಕ ಸ್ವತ್ತು ಸ್ವಂತ ಸ್ವತ್ತೆಂಬ ಭಾವನೆ ಗ್ರಾಮಸ್ಥರಲ್ಲಿ ಮೂಡಬೇಕು ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಧಿಕಾರಿ ಮಣಜೂರು ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯ್ತಿ ಸದಸ್ಯ ಎನ್.ಎಸ್.ಜಯಣ್ಣ, ಶಿರಂಗಾಲ ಗ್ರಾಮ ಪಂಚಾಯ್ತಿ ಸದಸ್ಯೆ ಶೃತಿಹೇಮಂತ್, ಗ್ರಾಮದ ಹಿರಿಯರಾದ ಎಸ್.ಎನ್. ಗುರುಲಿಂಗಪ್ಪ, ಎಸ್.ಪಿ.ಕೃಷ್ಣಪ್ಪ, ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ. ಚಂದ್ರಪ್ಪ, ಬಯಲು ರಂಗಮಂದಿರ ಹಾಗೂ ಸಾಂಸ್ಕøತಿಕ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ಎಂ.ಕೆ.ಶಶಿಧರ, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಸಿ.ಎಸ್.ಮಂಜುನಾಥ, ಹಾಸನ ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ಎಂ.ಎಂ ಶಿವರಾಂ, ಉದ್ಯಮಿ ಎಂ.ಪಿ.ರಾಜಶೇರ್, ಶಿರಂಗಾಲ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್, ಕಾರ್ಯದರ್ಶಿ ಸಿ.ಎನ್.ಲೋಕೇಶ್, ಜಿಲ್ಲಾ ನೇಕಾರರ ಸಮೂದಾಯ ಒಕ್ಕೂಟದ ಅಧ್ಯಕ್ಷ ಟಿ.ಕೆ.ಪಾಂಡುರಂಗ, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಎಂ.ಪಿ.ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.