ಮಡಿಕೇರಿ, ಜೂ. 12: ಕೇಂದ್ರ ಸರಕಾರ ಪಶ್ಚಿಮಘಟ್ಟ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆ ಮಾಡಿರುವದು ಕೊಡಗು ಜಿಲ್ಲೆಯಲ್ಲಿ ವಿಶೇಷವಾಗಿ ಗೌಡ ಜನಾಂಗ ಪ್ರಾಬಲ್ಯವುಳ್ಳ ಪ್ರದೇಶದ ಜನತೆಯ ಬದುಕಿಗೆ ಮಾರಕ ಹೊಡೆತವೆಂದು ಕೊಡಗಿನ ಸಮಸ್ತ ಗೌಡ ಜನಾಂಗ ಅಭಿಪ್ರಾಯಿಸಿದ್ದು, ಯೋಜನೆ ವಿರುದ್ಧ ಜನತೆ ಸಿಡಿದೇಳುವ ಸಾಧ್ಯತೆಯಿದೆ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕಸ್ತೂರಿ ರಂಗನ್ ವರದಿಯನ್ನು ಪರಿಶೀಲಿಸಲಾಗಿ ಈ ವರದಿ ನೇರವಾಗಿ ಜನಸಾಮಾನ್ಯರ ದೈನಂದಿನ ಬದುಕಿಗೆ ತೊಂದರೆ ನೀಡುವಂತೆ ಗೋಚರಿಸದಿದ್ದರೂ ಮುಂದೆ ಈ ವರದಿ ಜಾರಿ ಬಂದಲ್ಲಿ ಕೊಡಗು ಜಿಲ್ಲೆಯ ವಿಶೇಷವಾಗಿ ಗೌಡ ಜನಾಂಗ ಪ್ರಾಬಲ್ಯವುಳ್ಳ ಭಾಗಮಂಡಲ ನಾಡಿನ ಜನತೆಯ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಮಾರಕ ಎಂಬದರಲ್ಲಿ ಸಂಶಯವಿಲ್ಲ. ಕೇಂದ್ರ ಸರಕಾರ ಕೊಡಗಿನ ಸ್ಥಳೀಯ ಪಂಚಾಯತ್‍ಗಳ ಹಾಗೂ ಕೊಡಗಿನ ಜನಪ್ರತಿನಿಧಿಗಳ

(ಮೊದಲ ಪುಟದಿಂದ) ಕುಡಿಯರ ಮುತ್ತಪ್ಪ ಮಾತನಾಡಿ, ಸಂಸ್ಕøತಿಯ ನಾಡಿನಲ್ಲಿ ಇಂದು ಅರಣ್ಯ ಇಲಾಖೆಯ ಯೋಜನೆಯಿಂದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗಿದೆ. ಮುಂದೆ ಕೃಷಿ ಚಟುವಟಿಕೆಗಳಿಗೆ ಬಳಸುವ ಯಂತ್ರೋಪಕರಣಗಳ ಬಳಕೆಗೂ ತೊಂದರೆಯಾಗುವ ಸಾಧ್ಯತೆಗಳಿವೆ. ಅಧಿಕಾರಿಗಳು ಕೃಷಿಕರ ಪರ ನಿಂತು ಯೋಜನೆಯನ್ನು ಕೈಬಿಡಬೇಕು ಎಂದರು.

ಹೊಸೂರು ಸತೀಶ್ ಕುಮಾರ್ ಮಾತನಾಡಿ, ಸೂಕ್ಷ್ಮ ಪರಿಸರ ತಾಣದಿಂದಾಗಿ ಕೃಷಿಗೆ ರಾಸಾಯನಿಕ ಗೊಬ್ಬರ ಬಳಕೆಗೂ ತೊಂದರೆಯಾಗಲಿದೆ. ತಲಕಾವೇರಿ- ಕರಿಕೆ ರಸ್ತೆಗಳಲ್ಲಿ ಸಂಚಾರಕ್ಕೂ ಅಡಚಣೆಯಾಗಬಹುದು. ನಿತ್ಯ ಜೀವನಕ್ಕೆ ತೊಂದರೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಅರಣ್ಯದಂಚಿನಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನತೆ ಹಕ್ಕುಪತ್ರಕ್ಕಾಗಿ 3500ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದುವರೆಗೂ ಹಕ್ಕುಪತ್ರ ದೊರೆತಿಲ್ಲ. ಇನ್ನು ಮುಂದೆ ಸಿಗಬಹುದೇ? ಅರಣ್ಯ ಇಲಾಖೆಗೆ ಮನುಷ್ಯರ ರಕ್ಷಣೆ ಮುಖ್ಯನಾ ಅಥವಾ ಪ್ರಾಣಿಗಳ ರಕ್ಷಣೆ ಮುಖ್ಯನಾ ಎಂದು ಪ್ರಶ್ನಿಸಿದರು.

ಅಯ್ಯಂಗೇರಿ ಗ್ರಾ.ಪಂ. ಸದಸ್ಯ ಮನೋಜ್ ಮಾತನಾಡಿ, 300-400 ಇಂಚು ಮಳೆ ಬೀಳುವ ಪ್ರದೇಶವನ್ನು ಸೂಕ್ಷ್ಮ ಪರಿಸರ ಘೋಷಣೆ ಮಾಡುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದ ಅವರು, ಸೂಕ್ಷ್ಮ ಪರಿಸರ ತಾಣದಿಂದ ಜಮೀನುಗಳಿಗೆ ಬೆಲೆ ಕಡಿಮೆಯಾಗಲಿದೆ. ಇದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್ ಸಾಲವೂ ಕಡಿಮೆಯಾಗಲಿದೆ ಎಂದು ಹೇಳಿದರು.

ಕುದುಕುಳಿ ಭರತ್ ಮಾತನಾಡಿ ಸೂಕ್ಷ್ಮ ಪರಿಸರ ತಾಣದಿಂದಾಗಿ ರಾಷ್ಟ್ರೀಯ ಹಾಗೂ ರಾಜ್ಯಹೆದ್ದಾರಿಗೆ ತೊಡಕಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ ಮಾತನಾಡಿ, ಸೂಕ್ಷ್ಮ ಪರಿಸರ ತಾಣದ ಯೋಜನೆಯನ್ನು ಹಿಂಪಡೆಯಬೇಕು. ಸೂಕ್ಷ್ಮಪರಿಸರ ತಾಣಕ್ಕೆ ಸಂಬಂಧಿಸಿದ ಸಮಿತಿಯ ಸಭೆಯ ತೀರ್ಮಾನವನ್ನು ಕಾದುನೋಡಿ ಮುಂದಿನ ಹೋರಾಟವನ್ನು ರೂಪಿಸಲಾಗುವದು. ಜಯ ಸಿಗುವವರೆಗೆ ಹೋರಾಟ ಮುಂದುವರೆಯಲಿದೆ ಎಂದರು.

ಗ್ರಾ.ಪಂ. ಗುರುತಿಸಿದ ಜಾಗದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಅರಣ್ಯ ಇಲಾಖೆ ತಡೆಯೊಡ್ಡಿದೆ. ಮುಂದೆ ನಡೆದಾಡಲು ಬಿಡುವರೇ ಎಂದು ಪ್ರಶ್ನಿಸಿದ ಅವರು, ಕಸವಿಲೇವಾರಿ ಘಟಕಕ್ಕೆ 8 ತಿಂಗಳಾದರೂ ಅನುಮತಿ ನೀಡಿಲ್ಲ. ಇನ್ನು ನೀಡದಿದ್ದಲ್ಲಿ ಅರಣ್ಯ ಇಲಾಖೆಯ ಮುಂದೆ ಕಸ ಸುರಿಯುತ್ತೇವೆಂದು ಎಚ್ಚರಿಸಿದರು. ಇದಕ್ಕೆ ಸಾರ್ವಜನಿಕರು ಧ್ವನಿಗೂಡಿಸಿ ಕೋರಂಗಾಲದಲ್ಲಿ ಅಂಗನವಾಡಿ, ಮನೆ, ನದಿಗಳು ಹರಿಯುವದರಿಂದ ಸಮಸ್ಯೆಯಾಗಲಿದೆ. ತಣ್ಣಿಮಾನಿ ಯಲ್ಲಿಯೇ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಆಗ್ರಹಿಸಿದರು.

ಅಮೆ ಬಾಲಕೃಷ್ಣ, ಸೂಕ್ಷ್ಮ ಪರಿಸರ ತಾಣವನ್ನು ವಿರೋಧಿಸಿ ಮಾತನಾಡಿದರು. ಡಿಎಫ್‍ಓ ಜಯ ಮಾತನಾಡಿ ರೈತರ ನೋವು ಅರ್ಥವಾಗಿದೆ. ಸೂಕ್ಷ್ಮ ಪರಿಸರ ತಾಣ ಅರಣ್ಯ ಇಲಾಖೆ ಬೌಂಡರಿಯಿಂದ 1 ಕಿ.ಮೀ. ದೂರ ಮಾತ್ರ ಘೋಷಣೆಯಾಗಿದೆ. ಇದರಿಂದ ರೈತರಿಗೆ ತೊಂದರೆ ಇಲ್ಲ. ಇಂದಿನ ಸಭೆಯ ನಿರ್ಣಯ ಮತ್ತು ವಿರೋಧವನ್ನು ಸಮಿತಿಯ ನಿರ್ಣಯವನ್ನು ಮೇಲಾಧಿಕಾರಿಗಳಿಗೆ ನೀಡಲಾಗುವದು ಎಂದರು.

ತಹಶೀಲ್ದಾರ್ ಕುಸುಮಾ ಮಾತನಾಡಿ, ಸಿ ಅಂಡ್ ಡಿ ಜಮೀನಿನಲ್ಲಿರುವವರಿಗೆ ಸರ್ಕಾರದ ನಿರ್ದೇಶನದಂತೆ ಹಕ್ಕುಪತ್ರ ವಿತರಿಸಲಾಗುವದು ಎಂದರು.

ಸೂಕ್ಷ್ಮ ಪರಿಸರ ತಾಣಕ್ಕೆ ವಿರೋಧ ಹಾಗೂ ಕಸ ವಿಲೇವಾರಿ ಘಟಕವನ್ನು ತಣ್ಣಿಮಾನಿಯಲ್ಲಿಯೇ ಸ್ಥಾಪಿಸಲು ನಿರ್ಣಯವನ್ನು ಓದಿದ ನಂತರ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ, ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ಗಿರೀಶ್, ಜಿ.ಪಂ. ಸದಸ್ಯರಾದ ಕವಿತಾ ಪ್ರಭಾಕರ್, ಕುಮಾರ್ ಹಾಗೂ ಗ್ರಾ.ಪಂ. ಸದಸ್ಯರು ಮತ್ತಿತರರು ಇದ್ದರು.