ಶ್ರೀಮಂಗಲ, ಜೂ. 12: ಮೂಲತಃ ವೆಸ್ಟ್ ನೆಮ್ಮಲೆ ಗ್ರಾಮದವರಾದ ಪ್ರಸ್ತುತ ಶ್ರೀಮಂಗಲ ಸಮೀಪದ ಕಾಕೂರು ಗ್ರಾಮದಲ್ಲಿ ವಾಸವಾಗಿರುವ ಕುಂಞಂಗಡ ಬೋಸ್ ಮಾದಪ್ಪ ಅವರನ್ನು ರಾಜ್ಯ ಅರಣ್ಯ ಇಲಾಖೆಯ ಗೌರವಾನ್ವಿತ ವನ್ಯಜೀವಿ ಪರಿಪಾಲಕ (ವೈಲ್ಡ್ ಲೈಫ್ ವಾರ್ಡನ್)ರನ್ನಾಗಿ ನೇಮಿಸಲಾಗಿದೆ.

ಉರಗ ತಜ್ಞರೆಂದು ಹೆಸರುವಾಸಿಯಾಗಿರುವ ಕುಂಞಂಗಡ ಬೋಸ್ ಮಾದಪ್ಪ ಅವರು ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಉರಗಗಳ (ಹಾವು) ಬಗ್ಗೆ ಮಾಹಿತಿ ನೀಡುವದು ಮತ್ತು ಜೀವ ವೈವಿಧ್ಯತೆಯಲ್ಲಿ ಹಾವುಗಳ ಮಹತ್ವವನ್ನು ಮನವರಿಕೆ ಮಾಡಿಕೊಡುವಲ್ಲಿ ಸಫಲರಾಗಿದ್ದಾರೆ.

ಪ್ರಸ್ತುತ ಕೊಡಗು ವನ್ಯಜೀವಿ ಸಂಘ ಹಾಗೂ ವೈಲ್ಡ್ ಲೈಫ್ ಫಸ್ಟ್ ಸಂಘದ ಸಕ್ರಿಯ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ವನ್ಯಜೀವಿ ಛಾಯಾಗ್ರಾಹಕರೂ ಆಗಿರುವ ಇವರ ಪರಿಸರ ಸಂಬಂಧಿತ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರಕಾರ ಹಾಗೂ ರಾಜ್ಯ ಅರಣ್ಯ ಇಲಾಖೆಯಿಂದ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ 4(1) (ಬಿಬಿ)ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ವನ್ಯಜೀವಿ ಪರಿಪಾಲಕ

(ವೈಲ್ಡ್ ಲೈಫ್ ವಾರ್ಡನ್)ರನ್ನಾಗಿ ಎರಡು ವರ್ಷಕ್ಕೆ ನೇಮಿಸಲಾಗಿದೆ.