ಮಡಿಕೇರಿ, ಜೂ.13 : ಆದಿವಾಸಿ ಗಳ ಅಭ್ಯುದಯಕ್ಕಾಗಿ ಜಾರಿಯಲ್ಲಿದ್ದ 307 ಯೋಜನೆಗಳಲ್ಲಿ 46 ಯೋಜನೆ ಗಳನ್ನು ಕಡಿತಗೊಳಿಸಿ ಕೇವಲ 261 ಯೋಜನೆಗಳನ್ನು ಸೀಮಿತಗೊಳಿಸಿ ರುವ ಕೇಂದ್ರ ಸರಕಾರ ವಾರ್ಷಿಕ ಅನುದಾನವನ್ನು ಕೂಡ ಕಡಿತ ಗೊಳಿಸುವ ಮೂಲಕ ಆದಿವಾಸಿಗಳ ದಮನಕ್ಕೆ ಮುಂದಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಪ್ರಮುಖ ಹಾಗೂ ಪ್ರಬಂಧಕಾರ ಕೆ. ಪ್ರಕಾಶ್ ಆರೋಪಿಸಿದ್ದಾರೆ.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ನಗರದ ಸರಕಾರಿ ನೌಕರರ ಸಭಾಂಗಣ ದಲ್ಲಿ ಆದಿವಾಸಿ ಸಮುದಾಯಗಳ ಬದುಕು, ಬವಣೆ, ಭಾಷೆ ಮತ್ತು ಸಂಸ್ಕøತಿಯ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ. ಪ್ರಕಾಶ್, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ನೈಸರ್ಗಿಕ ಸಂಪನ್ಮೂಲಗಳ ಕಾವಲುಗಾರರಾದ ಆದಿವಾಸಿಗಳನ್ನು ಒಕ್ಕಲೆಬ್ಬಿಸಿ ಬಂಡವಾಳಶಾಹಿಗಳಿಗೆ ಅನುಕೂಲ ಕಲ್ಪಿಸುವದಕ್ಕಾಗಿ ಆದಿವಾಸಿ ವಿರೋಧಿ ನೀತಿಗಳನ್ನು ಅನುಸರಿ ಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರ್ರ ಸರ್ಕಾರ ಬಜೆಟ್‍ನಲ್ಲಿ ಆದಿವಾಸಿಗಳಿಗಾಗಿ ಕೇವಲ 31,919 ಕೋಟಿ ಅನುದಾನವನ್ನು ಮಾತ್ರ ಮೀಸಲಿಟ್ಟಿದೆ. ಜಾದÀವ್ ವರದಿಯ ಪ್ರಕಾರ 49,992 ಕೋಟಿ ರೂ.ಗಳನ್ನು ಮೀಸಲಿಡಬೇಕಾಗಿತ್ತು. ಸುಮಾರು 18,073 ಕೋಟಿ ರೂ.ಗಳ ಕೊರತೆ ಉಂಟು ಮಾಡುವ ಮೂಲಕ ಕೇಂದ್ರ ಆದಿವಾಸಿಗಳನ್ನು ಕಡೆಗಣಿಸಿದೆ ಎಂದು ಕೆ. ಪ್ರಕಾಶ್ ಆರೋಪಿಸಿದರು.

ಆದಿವಾಸಿ ಮಹಿಳೆಯರು ರಕ್ತದ ಕೊರತೆಯಿಂದ ನರಳುತ್ತಿದ್ದಾರೆ. ಇಡೀ ಆದಿವಾಸಿ ಸಮುದಾಯಕ್ಕೆ ಆಹಾರ, ಆರೋಗ್ಯ ಹಾಗೂ ಶಿಕ್ಷಣದ ರಕ್ಷಣೆ ಇಲ್ಲದಾಗಿದೆ. ಆದಿವಾಸಿಗಳು ಸಂಗ್ರಹಿಸುವ ಅರಣ್ಯದ ಕಿರು ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆÉಯನ್ನು ನಿಗದಿಮಾಡುವ ಕಾಳಜಿಯನ್ನು ಕೂಡ ಸರ್ಕಾರ ತೋರುತ್ತಿಲ್ಲ ಎಂದು ಪ್ರಕಾಶ್ ಟೀಕಿಸಿದರು. ಇದೇ ತಿಂಗಳು ವಿಶಾಖಪಟ್ಟಣಂನಲ್ಲಿ ಅಖಿಲ ಭಾರತೀಯ ಆದಿವಾಸಿಗಳ ಸಮಾವೇಶ ನಡೆಯಲಿದ್ದು, ಕಾಡಿನ ಜನರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವದೆಂದು ತಿಳಿಸಿದರು.

ಸಿಪಿಐಎಂ ಮುಖಂಡ ಹಾಗೂ ಸಮನ್ವಯ ಸಮಿತಿಯ ಮುಖಂಡ ಕೆ.ವೈ. ಗುರುಶಾಂತ್ ಮಾತನಾಡಿ, ಕೊಡಗಿನ ಮೂಲ ನಿವಾಸಿಗಳು ಆದಿವಾಸಿಗಳಾಗಿದ್ದು, ಇಂದಿನ ನಾಗರಿಕ ಸಮಾಜ ಆದಿವಾಸಿಗಳನ್ನು ಕಡೆಗಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಗಳು ಆದಿವಾಸಿಗಳ ಬಗ್ಗೆ “ಹೋಪ್‍ಲೆಸ್ ಅಂಡ್ ಯೂಸ್‍ಲೆಸ್ ಆಗಿವೆ” ಎಂದು ಆರೋಪಿಸಿದ ಗುರುಶಾಂತ್, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿ ಕೊಡಗು ಜಿಲ್ಲೆಯಲ್ಲೂ ಆದಿವಾಸಿ ಕುಟುಂಬಗಳು ವಿನಾಶದ ಅಂಚಿಗೆ ತಲುಪಿವೆ ಎಂದು ಅಭಿಪ್ರಾಯಪಟ್ಟರು.

ಆದಿವಾಸಿ ಮುಖಂಡ ಹಾಗೂ ಸಮಿತಿಯ ಜಿಲ್ಲಾ ಸಂಚಾಲಕ ವೈ.ಕೆ. ಗಣೇಶ್ ಮಾತನಾಡಿ, ಜಿಲ್ಲೆಯಲ್ಲಿ ನಿವೇಶನ ರಹಿತ ಆದಿವಾಸಿಗಳ ಸಂಖ್ಯೆ ಹೆಚ್ಚಾಗಿದ್ದು, ಜೀತ ಪದ್ಧತಿ ಇನ್ನೂ ಜೀವಂತವಾಗಿದೆ ಎಂದರು. ಕೆಲವು ಕುಟುಂಬಗಳಿಗಷ್ಟೆ ಹಕ್ಕುಪತ್ರವನ್ನು ನೀಡಿ ರಾಜಕಾರಣಿಗಳು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅನೇಕ ಆದಿವಾಸಿ ಕುಟುಂಬಗಳ ಭೂಮಿ ಹಾಗೂ ಸ್ಮಶಾನ ಒತ್ತುವರಿಯಾಗಿದೆ. ಬಲಾಢ್ಯರು ಆದಿವಾಸಿಗಳನ್ನು ಬೆದರಿಸಿ ಓಡಿಸುವ ದೌರ್ಜನ್ಯಗಳು ನಡೆಯುತ್ತಿದೆ ಎಂದು ಆರೋಪಿಸಿದರು.

ಸಮಿತಿಯ ರಾಜ್ಯ ಸಂಚಾಲಕಿ ಪ್ರೇಮ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿರಿಜನ ಮುಖಂಡ ದಕ್ಷಿಣ ಕನ್ನಡ ಜಿಲ್ಲೆಯ ಕೃಷ್ಣಪ್ಪ, ಹುಣಸೂರಿನ ಜೆ.ಕೆ.ತಿಮ್ಮ, ಮಲೆಕುಡಿಯ ವಿಠಲ ಸೇರಿದಂತೆ ರಾಜ್ಯದ ವಿವಿಧೆಡೆಯ ಆದಿವಾಸಿ ಮುಖಂಡರು ಉಪಸ್ಥಿತರಿದ್ದರು.