ಸೋಮವಾರಪೇಟೆ, ಜೂ. 13: ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಹಾಗೂ ಬೆಟ್ಟದಳ್ಳಿ ಗ್ರಾ.ಪಂ. ಗಳ ಸಂಯುಕ್ತ ಆಶ್ರಯದಲ್ಲಿ ಶಾಂತಳ್ಳಿ ಕ್ಲಸ್ಟರ್ ವ್ಯಾಪ್ತಿಯ ವಿಶೇಷ ಹಾಗೂ ಸಾಮಾನ್ಯ ದಾಖಲಾತಿ ಆಂದೋಲನ ಕಾರ್ಯಕ್ರಮ ಬೆಟ್ಟದಳ್ಳಿಯಲ್ಲಿ ನಡೆಯಿತು.

6 ರಿಂದ 14 ವಯೋಮಾನದ ಮಕ್ಕಳಿಗೆ ಯಾವದೇ ತಾರತಮ್ಯವಿಲ್ಲದೆ ಕಡ್ಡಾಯ, ಉಚಿತ ಹಾಗೂ ಗುಣಮಟ್ಟದ ಪ್ರಾಥಮಿಕ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಹಮ್ಮಿ ಕೊಂಡಿದ್ದ ಜಾಥಾಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ ಚಾಲನೆ ನೀಡಿದರು. ಈ ಸಂದರ್ಭ ಶಾಂತಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಪಿ. ಅನಿಲ್ ಕುಮಾರ್, ಗ್ರಾಮಾಭಿವೃದ್ಧಿ ಅಧಿಕಾರಿಗಳಾದ ತಮ್ಮಯ್ಯ, ಹೆಚ್.ಎಸ್. ಶಿವಪ್ಪ, ಸಿಬ್ಬಂದಿ ಶಾಂತಕುಮಾರ್, ಶಿಕ್ಷಕರುಗಳಾದ ಪರಮೇಶ್ವರಸ್ವಾಮಿ, ವೆಂಕಟೇಶ್, ಅಪ್ಪಯ್ಯ, ಎಂ.ಆರ್. ಸತೀಶ್, ರಮೇಶ್, ಲತಾಮಣಿ, ಮನೋಹರ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.