*ಗೋಣಿಕೊಪ್ಪಲು, ಜೂ. 13: ಆನೆಚೌಕೂರು ವಲಯದ ಹಡಗುನಗುಂಡಿ ಕೆರೆಗೆ ಬಿದ್ದು ಕಾಡಾನೆ ಮೃತಪಟ್ಟಿರುವದು ಗೋಚರಿಸಿದೆ. ಕಾಲು ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಗಾಯಮಾಡಿಕೊಂಡಿದ್ದ ಕಾಡಾನೆ ಮಲ್ಲೂರು ಸಮೀಪದ ಲಕ್ಷ್ಮಣ ತೀರ್ಥ ನದಿ ನೀರಿನಲ್ಲಿ ನಿಂತು ಕಾಲ ಕಳೆಯುತ್ತಿತ್ತು

ಕಳೆದ ಒಂದು ವಾರದ ಹಿಂದೆ ಅರಣ್ಯಾಧಿಕಾರಿಗಳು ಆನೆಯನ್ನು ಸಾಕಾನೆ ಸಹಾಯದಿಂದ ಮೇಲಕ್ಕೆ ತಂದು ವನ್ಯ ಜೀವಿ ವೈದ್ಯಾಧಿಕಾರಿ ಉಮಾಶಂಕರ್ ಮೂಲಕ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಕಲ್ಲಳ್ಳ ವಲಯದ ಗಣಗೂರು ಅರಣ್ಯಕ್ಕೆ ಬಿಡಲಾಗಿತ್ತು. ಆಹಾರ ತಿನ್ನುತ್ತಾ ಮೆಲ್ಲನೆ ಓಡಾಡಿಕೊಂಡಿದ್ದ ಸುಮಾರು 60 ವರ್ಷ ಪ್ರಾಯದ ಹೆಣ್ಣಾನೆ ಆನೆಚೌಕೂರು ವಲಯಕ್ಕೆ ಬಂದು ಕಾಲು ಜಾರಿ ಬಿದ್ದು ಮೃತಪಟ್ಟಿದೆ ಎಂದು ಡಾ. ಉಮಾಶಂಕರ್ ಹೇಳಿದರು.

ಮೇಟಿಂಗ್ ಸಮಯದಲ್ಲಿ ಆನೆ ಕಾಲಿಗೆ ನೋವು ಮಾಡಿಕೊಂಡಿದ್ದಿ ರಬಹುದು. ಸಾಮಾನ್ಯ ಗಾಯಗಳಾದರೆ ನೀರಿನ ಕೆಸರಿನಲ್ಲಿ ಬಿದ್ದು ತಾವೇ ವಾಸಿಮಾಡಿಕೊಳ್ಳುತ್ತವೆ. ಆದರೆ ಕಾಲಿಗೆ ಗಾಯವಾಗಿದ್ದರಿಂದ ನಡೆದಾಡುವಾಗ ಭಾರ ಬಿದ್ದು ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ ಎಂದು ಉಮಾಶಂಕರ್ ಹೇಳಿದರು.