ಮಡಿಕೇರಿ, ಜೂ.13: ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ವಿಧಾನಪರಿಷತ್‍ನಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮೂಲಕ ಕೊಡಗು ಜಿಲ್ಲೆಯಲ್ಲಿ ಜಾನುವಾರುಗಳು, ಪಶು ಆಸ್ಪತ್ರೆ ಸಂಖ್ಯೆ ಎಷ್ಟಿದೆ ಎಂಬ ಮಾಹಿತಿ ಕೇಳಿದ್ದು, ಈ ಸಂಬಂಧ ಪಶು ಸಂಗೋಪನೆ ಸಚಿವ ಎ.ಮಂಜು ಅವರು ಮಾಹಿತಿ ನೀಡಿದ್ದಾರೆ. 19ನೇ ಜಾನುವಾರು ಗಣತಿಯ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಒಟ್ಟು 1,77,038 ಜಾನುವಾರುಗಳಿರುತ್ತವೆ. ಕೊಡಗು ಜಿಲೆಯಲ್ಲಿ 73 ವಿವಿಧ ಹಂತದ ಪಶುವೈದ್ಯಕೀಯ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಪಶು ವೈದ್ಯಕೀಯ ಸಂಸ್ಥೆ ಕಾರ್ಯನಿರ್ವಹಿಸುವ 8 ಕಿ.ಮೀ. ವ್ಯಾಪ್ತಿಗೆ ಒಳಪಟ್ಟಂತೆ 5 ಸಾವಿರ ಜಾನುವಾರು ಘಟಕಗಳನ್ನು ಹೊಂದಿರುವ ಗ್ರಾಮಗಳಲ್ಲಿ ಒಂದು ಪಶುವೈದ್ಯಕೀಯ ಸಂಸ್ಥೆ ಕಾರ್ಯ ನಿರ್ವಹಿಸಬೇಕು ಎಂದು ಪಶು ಸಂಗೋಪನೆ ಸಚಿವ ಎ.ಮಂಜು ಮಾಹಿತಿ ನೀಡಿದರು.