ಮಡಿಕೇರಿ, ಜೂ. 14: ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಜೊತೆಗೆ ಇತರ ಸಾಮಾನ್ಯ ವರ್ಗದವರಿಗೂ ರಾಜ್ಯ ಸರಕಾರ ವಸತಿ ಯೋಜ&divound; Éಯಡಿ ಮನೆಗಳನ್ನು ನಿರ್ಮಿಸಿ ಕೊಡಲಿದೆ ಎಂದು ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದ್ದಾರೆ.ಸದನದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಈ ಬಗ್ಗೆ ವಿಷಯ ಪ್ರಸ್ತಾಪಿಸಿ ಬಡತನದಲ್ಲಿ ಸಾಮಾನ್ಯ ವರ್ಗದ ಅನೇಕರಿದ್ದು, ಸರಕಾರದ ಪೈಸಾರಿ ಅಥವಾ ಊರುಗುಪ್ಪೆ, ಕಂದಾಯ ಜಮೀನುಗಳಲ್ಲಿ ಸ್ವಂತ ನೆಲೆ ಕಂಡುಕೊಂಡಿದ್ದು, ಇಂತಹವರಿಗೆ ಇಲಾಖೆಯ ಮಂದಿ ಕಿರುಕುಳ ನೀಡುತ್ತಿರುವದಾಗಿ ಗಮನ ಸೆಳೆದರು. ಶಾಸಕರ ಪ್ರಶ್ನೆಗೆ ಇತರ ಜಿಲ್ಲೆಗಳ ಶಾಸಕರು ಧÀನಿಗೂಡಿಸಿದರು. ಸಚಿವ ಕಾಗೋಡು ತಿಮ್ಮಪ್ಪ ಅವರು, ಎಲ್ಲಾ ವರ್ಗದ ಬಡವರಿಗೂ ಮನೆಯನ್ನು ದೊರಕಿಸುವ ಆಶ್ವಾಸನೆಯೊಂದಿಗೆ, ಬಡವರ ಮನೆ ಅಥವಾ ನಿವೇಶನಗಳಿಗೆ ಸಂಬಂಧಿಸಿದಂತೆ ಯಾವ

(ಮೊದಲ ಪುಟದಿಂದ) ಜಾಗವಿದ್ದರೂ ಅಲ್ಲಿ ಅಧಿಕಾರಿಗಳು ಕಿರುಕುಳ ನೀಡಿದರೆ ಸರಕಾರದ ಗಮನಕ್ಕೆ ತರುವಂತೆ ಸೂಚಿಸಿದರು.

ಅಲ್ಲದೆ ಅಂತಹ ಅಧಿಕಾರಿಗಳು ತಹಶೀಲ್ದಾರ್ ಅಥವಾ ಇನ್ನು ಯಾವ ಹಂತದವರೇ ಆಗಿದ್ದರೂ ಶಿಸ್ತು ಕ್ರಮ ಕೈಗೊಳ್ಳುವದರೊಂದಿಗೆ ಬಡವರಿಗೆ ನ್ಯಾಯ ದೊರಕಿಸಿಕೊಡಲಾಗುವದು ಎಂದರು. ಒಂದು ವೇಳೆ ‘ಸಿ’ ಮತ್ತು ‘ಡಿ’ ನಿಯಮಕ್ಕೆ ಒಳಪಟ್ಟ ಭೂಮಿಯಾದರೂ, ಮನೆ ನಿವೇಶನಕ್ಕೆ ಅಡ್ಡಿಪಡಿಸಲಾಗದು ಎಂದು ಘೋಷಿಸಿದ ಕಂದಾಯ ಸಚಿವರು, ಅಂತಹ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೆ ಒಕ್ಕಲೆಬ್ಬಿಸದೆ ನಿವೇಶನ ಹಕ್ಕು ಪತ್ರ ಕೊಡಿಸಲಾಗುವದು ಎಂದರು.

ಪದೇ ಪದೇ ಇಂತಹ ದೂರುಗಳು ತಮಗೆ ಬರುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವದಾಗಿ ತಿಳಿಸಿದ ಕಂದಾಯ ಸಚಿವರು, ಇಲಾಖಾ ಅಧಿಕಾರಿಗಳು ಜನರಿಗೆ ಕಿರುಕುಳ ನೀಡುವ ಬದಲು ಅವರ ಕಷ್ಟಗಳಿಗೆ ಸ್ಪಂದಿಸುವಂತೆ ತಾಕೀತು ಮಾಡಿದರು. ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಕೊಡಗಿನಲ್ಲಿ ಇಂತಹ ಮನೆ ಅಥವಾ ನಿವೇಶನ ಹೊಂದಿರುವವರಿಗೆ ಕಂದಾಯ ಇಲಾಖೆಯವರು ಕಿರುಕುಳ ನೀಡುತ್ತಿರುವದಾಗಿ ತಮಗೆ ಸಾಕಷ್ಟು ದೂರುಗಳು ಬಂದಿರುವದಾಗಿ ಸಚಿವರ ಗಮನ ಸೆಳೆದರು.