ಮಡಿಕೇರಿ, ಜೂ. 14: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಗೆ ಹೈದರಬಾದ್-ಕರ್ನಾಟಕ 371(ಜಿ)ಯ ಸ್ಥಳೀಯ ವೃಂದದವರಿಗೆ 371 ಜಿ.ಅಡಿಯಲ್ಲಿ ಮೀಸಲಿಟ್ಟ ಹುದ್ದೆಗಳಲ್ಲಿ ಖಾಲಿ ಇರುವ ಭೋದಕ ಹುದ್ದೆಗಳನ್ನು ಭರ್ತಿ ಮಾಡಲು ತಾ. 19 ರಂದು ನೇರ ಸಂದರ್ಶನ ನಡೆಯಲಿದೆ.

ಹೆಚ್ಚಿನ ವಿವರಣೆ ಹಾಗೂ ಮಾಹಿತಿಯನ್ನು ಸಂಸ್ಥೆಯ ಅಂತರ್ಜಾಲ ತಿತಿತಿ.ಞimsಞoಜಚಿgu.ಞಚಿಡಿ.ಟಿiಛಿ.iಟಿ ನಲ್ಲಿ ಪಡೆಯುವದು. ವಿದ್ಯಾರ್ಹತೆ, ಭೋದನಾ ಅನುಭವ, ಸಂಶೋಧನಾ ಪ್ರತಿ ಹಾಗೂ ಇತರ ಮೂಲ ದಾಖಲಾತಿಗಳನ್ನು ಸಂದರ್ಶನದ ವೇಳೆ ಹಾಜರುಪಡಿಸತಕ್ಕದ್ದು ಹಾಗೂ ಎರಡು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರವನ್ನು ಒದಗಿಸುವದು.

ನಿಗದಿತ ಅರ್ಜಿ ನಮೂನೆಯನ್ನು ಸಂಸ್ಥೆಯ ಅಂತರ್ಜಾಲ ತಿತಿತಿ.ಞimsಞoಜಚಿgu.ಞಚಿಡಿ.ಟಿiಛಿ.iಟಿ ಇಲ್ಲಿಂದ ಡೌನ್‍ಲೋಡ್ ಮಾಡಿಕೊಂಡು ರೂ. 500 ಮೊತ್ತದ ಡಿ.ಡಿ.ಯನ್ನು ನಿರ್ದೇಶಕರು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಇವರಿಗೆ ರವಾನಿಸುವದು ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ತಿಳಿಸಿದ್ದಾರೆ.