ಶನಿವಾರಸಂತೆ, ಜೂ. 14: ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಲಿತ ಮುಖಂಡರುಗಳ ಸಭೆ ಠಾಣಾಧಿಕಾರಿ ಹೆಚ್. ಎಂ. ಮರಿಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲಾ ದಲಿತ ಸಮಿತಿಯ ಸಂಚಾಲಕ ಈರಪ್ಪ ಮಾತನಾಡಿ ದೊಡ್ಡಳ್ಳಿ ಗ್ರಾಮದ ಮನು ಅವರಿಗೆ ಸೇರಿದ ಆಸ್ತಿಯ ಹಾಗೂ ಜಾಗದ ವಿವಾದದ ಬಗ್ಗೆ ಪ್ರಸ್ತಾಪಿಸಿ ಪರಿಹಾರ ಕೊಡಿಸುವಂತೆ ಮನವಿ ಮಾಡಿದರು.

ಆನಂದ ಅವರು ಮಾತನಾಡಿ, ಪೈಸಾರಿ ಜಾಗದ ಒತ್ತುವರಿ ಮಾಡಿಕೊಂಡ ಬಗ್ಗೆ ಇದರಿಂದ ದಲಿತರಿಗೆ ಅನ್ಯಾಯವಾಗುತ್ತಿದೆ. ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಕೋರಿದರು.

ವಕೀಲ ಶಂಕರ್ ಮಾತನಾಡಿ ಎಸ್.ಸಿ.-ಎಸ್.ಟಿ. ಕಾಯ್ದೆ ಬಗ್ಗೆ ಇತ್ತೀಚೆಗೆ ಆದ ತಿದ್ದುಪಡಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಅಧ್ಯಕ್ಷತೆ ವಹಿಸಿದ್ದ ಠಾಣಾಧಿಕಾರಿ ಮರಿಸ್ವಾಮಿ ಮಾತನಾಡಿ, ದಲಿತರಿಗೆ ಆದ ಅನ್ಯಾಯ ಹಾಗೂ ಕಿರುಕುಳ ತಪ್ಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವದು ಎಂದರು.

ಸಭೆಯಲ್ಲಿ ದಲಿತ ಪ್ರಮುಖರಾದ ಜಿ. ಪಂ. ಸದಸ್ಯೆ ಸರೋಜಮ್ಮ, ಎಂ. ಎಸ್. ಚಂದ್ರಪ್ಪ, ಸತೀಶ್, ಉಮೇಶ್, ದಯಾಕರ್, ಡಿ. ಆರ್. ವೇದಕುಮಾರ್, ದೇವರಾಜ್, ದೊಡ್ಡಯ್ಯ, ಡಿ. ಡಿ. ಪಾಪಣ್ಣ, ಎನ್. ಎಂ. ಸಿದ್ದರಾಮಯ್ಯ, ರಾಜಕುಮಾರ್ ಇತರರಿದ್ದರು.