ಗೋಣಿಕೊಪ್ಪಲು, ಜೂ. 14: ರುದ್ರಬೀಡು ಶ್ರೀ ಬಾಡತಯ್ಯಪ್ಪ ದೇವಸ್ಥಾನದಲ್ಲಿ ತಾ. 15 ರಿಂದ 19 ರವರೆಗೆ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ, ಶ್ರೀ ಈಶ್ವರ, ಶ್ರೀ ಭಗವತಿ ಹಾಗೂ ನವಗ್ರಹ ದೇವರುಗಳ ಅಷ್ಟಬಂಧ ಬ್ರಹ್ಮ ಕಲಸ ಪ್ರತಿಷ್ಠಾಪನಾ ಕಾರ್ಯಗಳು ನಡೆಯಲಿದೆ.

ತಾ. 15 ರಂದು ಬೆಳಿಗ್ಗೆ 9 ರಿಂದ ದೇವತಾ ಪ್ರಾರ್ಥನೆ, ಮಹಾಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಗಣಪತಿ ಹೋಮ, ಮಹಾ ಮಂಗಳಾರತಿ, ಸಂಜೆ 5 ರಿಂದ ಯಾಗಶಾಲಾ ಪ್ರವೇಶ, ಕುಂಡ ಸಂಸ್ಕಾರ, ಅಗ್ನಿ ಜನನ, ಕಲಶ ಸ್ಥಾಪನೆ, ವಾಸ್ತು ಹೋಮ, ಬಲಿ, ಮಹಾಮಂಗಳಾರತಿ ಮೂಲಕ ಚಾಲನೆ ಸಿಗಲಿದೆ.

ತಾ. 16 ರಂದು ಬೆ. 6.30 ರಿಂದ 5 ಗಂಟೆವರೆಗೆ, ಸಂಜೆ 5.30 ಕ್ಕೆ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ.

17 ಹಾಗೂ 18 ರಂದು ಪೂಜಾ ವಿಧಿವಿಧಾನಗಳು ನೆರವೇರಲಿವೆ. ತಾ. 19 ರಂದು ಬೆ. 9 ರಿಂದ ಮಹಾ ಗಣಪತಿ ಪೂಜೆ, ಪುಣ್ಯಾಹ ವಾಚನ, ಶಾಂತಿ ಹೋಮ, ಮೂಲಮಂತ್ರ ಹೋಮ, ನವಗ್ರಹ ಹೋಮ, ಪ್ರಾಯಶ್ಚಿತ ಹೋಮ, ಮಹಾ ಪೂರ್ಣಾಹುತಿ, ಬ್ರಹ್ಮಕಲಶಾಭಿಷೇಕ, ದೇವರ ಅಲಂಕಾರ, ಮಹಾಪೂಜೆ, ಮಹಾಮಂಗಳಾರತಿ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚೆಪ್ಪುಡಿರ ನಾಣಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.