ಶ್ರೀಮಂಗಲ, ಜೂ. 14: ಚಿಕ್ಕಮಗಳೂರು ಹಾಗೂ ಮೂಡಿಗೆರೆಗೆ ಆಗಮಿಸುತ್ತಿರುವ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಮೂಲಕ ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟ ವಿವಿಧ ಬೇಡಿಕೆಗಳ ಕುರಿತು ಬುಧವಾರ ವೀರಾಜಪೇಟೆಯಲ್ಲಿ ಮನವಿ ಪತ್ರ ಸಲಿಸಲಾಯಿತು.

ತಾ.15ರಂದು (ಇಂದು) ಚಿಕ್ಕಮಗಳೂರು ಹಾಗೂ ಮೂಡಿಗೆರೆಗೆ ಆಗಮಿಸಿ ಎನ್.ಡಿ.ಎ ಸರಕಾರದ ಮೂರು ವರ್ಷದ ಅಭಿವೃದ್ದಿ ಕಾರ್ಯಕ್ರಮ ಹಾಗೂ ಸಾಧನೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಲಿದ್ದು, ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಕೂಡ ಈ ಕಾರ್ಯಕ್ರಮದಲ್ಲಿ ಬಾಗವಹಿಸಲು ತೆರಳಿದ್ದು ಇವರ ಮೂಲಕ ಸಂಕಷ್ಟದಲ್ಲಿರುವ ಬೆಳೆಗಾರರ ಸಮಸ್ಯೆಯನ್ನು ಗಮನ ಸೆಳೆಯಲು ಮನವಿಪತ್ರ ಸಲ್ಲಿಸಲಾಯಿತು.

ಇದಲ್ಲದೆ 2015ರಲ್ಲಿ ಬೆಳೆಗಾರರ ಒಕ್ಕೂಟದ ನಿಯೋಗ ದೆಹಲಿಗೆ ತೆರಳಿ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮ್ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಬೇಟಿ ಮಾಡಿ ಚರ್ಚಿಸಿರುವ ವಿಷಯ ಹಾಗೂ ದಾಖಲೆಗಳನ್ನು ಮನವಿ ಪತ್ರದೊಂದಿಗೆ ಲಗ್ಗತಿಸಲಾಯಿತು.

ಈ ಸಂದರ್ಭ ಬೆಳೆಗಾರರ ಒಕ್ಕೂಟದ ಪ್ರಭಾರ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್ಯ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಮಾಜಿ ಕಾರ್ಯದರ್ಶಿಗಳಾದ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಜಮ್ಮಡ ಮೋಹನ್ ಮಾದಪ್ಪ, ಪಾಂಡಂಡ ನರೇಶ್, ಸಲಹೆಗಾರ ಚೆಪ್ಪುಡೀರ ಶರಿ ಸುಬ್ಬಯ್ಯ ಹಾಜರಿದ್ದರು.