ಮಡಿಕೇರಿ, ಜೂ. 14: ಮುಂಗಾರಿನ ನಿರೀಕ್ಷೆಯಲ್ಲಿರುವ ರೈತರು ಇದೀಗ ಆಗೊಮ್ಮೆ ಈಗೊಮ್ಮೆ ಬೀಳುತ್ತಿರುವ ಮಳೆಯನ್ನು ಆಶ್ರಯಿಸಿಕೊಂಡು ಕೃಷಿ ಚಟುವಟಿಕೆ ಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಆದರೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿ ಬೇಕಾಗಿರುವ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಪಡೆಯಲು ರೈತರು ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ಕಡ್ಡಾಯವಾಗಿ ರಸಗೊಬ್ಬರ ಮಾರಾಟ ಗಾರರಿಗೆ ನೀಡಿ ನೋಂದಾಯಿಸಿಕೊಳ್ಳ ಬೇಕಾಗಿದೆ. ಜೊತೆಗೆ ಮಾರಾಟ ಗಾರರಿಗೆ ರಸಗೊಬ್ಬರ ಹಾಗೂ ಕೀಟ&divound; Áಶಕಗಳನ್ನು ಮಾರಾಟ ಮಾಡುವ ಸಂದರ್ಭ ಸಾಮಾನ್ಯ ಜ್ಞಾನವೂ ಅಗತ್ಯವಿದೆ. ಇದಕ್ಕಾಗಿ ಗೋಣಿಕೊಪ್ಪಲಿನಲ್ಲಿ ವಾರಕ್ಕೊಮ್ಮೆ ತರಗತಿಗೆ ತೆರಳಿ ತರಬೇತಿ ಪಡೆಯುತ್ತಿದ್ದಾರೆ.

ದೂರದೃಷ್ಟಿತ್ವದ ಯೋಜನೆಯನ್ನು ಮುಂದಿಟ್ಟುಕೊಂಡಿರುವ ಕೇಂದ್ರ ಸರ್ಕಾರ ಗ್ಯಾಸ್ ವಿತರಣೆ ಮಾದರಿಯಲ್ಲಿಯೇ ರಸಗೊಬ್ಬರ ಮತ್ತು ಕೀಟನಾಶಕಗಳ ಸಬ್ಸಿಡಿಗಳು ರೈತರಿಗೆ ನೇರವಾಗಿ ತಲಪಬೇಕೆನ್ನುವ ಉದ್ದೇಶದಿಂದ ರೈತರ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ನೋಂದಾವಣೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯ ಜೊತೆಗೆ ಹೆಬ್ಬೆರಳು ಗುರುತನ್ನು ಚಿಲ್ಲರೆ ರಸಗೊಬ್ಬರ ಮಾರಾಟಗಾರರಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಾಗಿದೆ. ಇದೀಗ ರೈತರು ತಮ್ಮ ಜಮೀನುಗಳಿಗೆ ಬೇಕಾಗುವಷ್ಟು ಅಲ್ಲದೆ ಹೆಚ್ಚುವರಿ ರಸಗೊಬ್ಬರವನ್ನು ಸಬ್ಸಿಡಿಯೊಂದಿಗೆ ಖರೀದಿಸಿಕೊಳ್ಳಬಹುದು. ಹೊಸ ನಿಯಮದಂತೆ ರೈತರ ಜಮೀನುಗಳಿಗೆ ಬೇಕಾಗುವಷ್ಟು ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಖರೀದಿಸಿ ಕೊಳ್ಳಲು ಮಾರಾಟಗಾರರಿಗೆ ಎಲ್ಲಾ ಚಿಲ್ಲರೆ ರಸಗೊಬ್ಬರ ಮಳಿಗೆಗಳಲ್ಲಿ ಮಾರಾಟ ಯಂತ್ರ (ಪಾಯಿಂಟ್ ಆಫ್ ಸೇಲ್ ಮೆಷಿನ್)ವನ್ನು ಅಳವಡಿಸಿಕೊಳ್ಳಲು ನಿಯಮ ರೂಪಿಸಲಾಗಿದೆ. ಈ ಯಂತ್ರದ ಬಳಕೆಯ ಬಗ್ಗೆ ಮಾರಾಟಗಾರರಿಗೆ ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ (ಆರ್‍ಸಿಎಫ್) ಸಂಸ್ಥೆ ಮೊದಲ ಸುತ್ತಿನ

(ಮೊದಲ ಪುಟದಿಂದ) ತರಬೇತಿಯನ್ನು ನೀಡಿದೆ. ಎರಡನೇ ಸುತ್ತಿನ ತರಬೇತಿಯನ್ನು ಯಂತ್ರ ಜಿಲ್ಲೆಗೆ ರವಾನೆಯಾದ ಬಳಿಕ ಕೈಗೊಳ್ಳಲಾಗುವದು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಈ ಯಂತ್ರದ ಬಳಕೆ ಯಿಂದ ರಸಗೊಬ್ಬರ ದುರ್ಬಳಕೆ ಯಾಗದೆ ರೈತರಿಗೆ ನೇರ ಪ್ರಯೋಜನ ದೊರೆಯಲಿದೆ. ನೇರ ಪ್ರಯೋಜನ ವರ್ಗಾವಣೆ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‍ಫರ್ ಡಿಬಿಟಿ) ಯೋಜನೆ ಕಾರ್ಯರೂಪಕ್ಕೆ ಬರಲಿದ್ದು, ಇದರಿಂದ ರೈತರಿಗೆ ಅನುಕೂಲ ವಾಗಲಿದೆ. ಸಬ್ಸಿಡಿ ಹಣ ನೇರವಾಗಿ ರೈತರ ಖಾತೆಗೆ ದೊರೆಯಲಿದೆ.

ರಸಗೊಬ್ಬರ ಬಳಕೆಯ ಮಾಹಿತಿ ಅಗತ್ಯ

ಇದುವರೆಗೂ ಮಾರಾಟಗಾರರಿಗೆ ರಸಗೊಬ್ಬರ ಹಾಗೂ ಕೀಟನಾಶಕ ಬಳಕೆಯ ಬಗ್ಗೆ ಯಾವದೇ ಮಾಹಿತಿಯಿಲ್ಲದಿದ್ದರೂ ಅಂತಹವರು ಕೃಷಿ ಇಲಾಖೆಯ ಮೂಲಕ ನೋಂದಾಯಿಸಿಕೊಂಡು ಮಾರಾಟ ಮಳಿಗೆಯನ್ನು ತೆರೆಯಬಹುದಿತ್ತು. ಆದರೆ ಸರಕಾರದ ಹೊಸ ನಿಯಮದಂತೆ ಮಾರಾಟಗಾರರಿಗೆ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯ ಬಗ್ಗೆ ಅಗತ್ಯ ಸಾಮಾನ್ಯ ಜ್ಞಾನದ ಅವಶ್ಯಕತೆಯಿದೆ.

ಈ ಹಿನ್ನೆಲೆಯಲ್ಲಿ ರಸಗೊಬ್ಬರ ಮಾರಾಟಗಾರರಿಗೆ ಕೃಷಿ ಇಲಾಖೆ 48 ತರಗತಿಯೊಂದಿಗೆ ತರಬೇತಿ ನೀಡಲು ಯೋಜನೆ ರೂಪಿಸಿದೆ. ಈಗಾಗಲೇ ಮೊದಲ 40 ಮಂದಿಯ ತಂಡಕ್ಕೆ ತರಬೇತಿ ಆರಂಭವಾಗಿದ್ದು, ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಾರಾಟಗಾರರಿಗೆ ತರಗತಿಗಳು ನಡೆಯುತ್ತಿದೆ. ಇದುವರೆಗೆ ಸುಮಾರು 31 ತರಗತಿ ನಡೆದಿದ್ದು, ವಾರಕ್ಕೊಮ್ಮೆ ಪ್ರತೀ ಶನಿವಾರ ತರಗತಿ ನಡೆಯುತ್ತಿದೆ. ಅಲ್ಲದೆ ಇದುವರೆಗೆ 2 ಪರೀಕ್ಷೆಗಳು ನಡೆದಿವೆ. ಇನ್ನೆರಡು ಪರೀಕ್ಷೆಗಳು ಮುಂದಿನ ದಿನಗಳಲ್ಲಿ ನಡೆಯಲಿವೆ ಎನ್ನಲಾಗಿದೆ.

ಎರಡನೇ ತಂಡದ ತರಬೇತಿಗೆ 40 ಮಂದಿ ಮಾರಾಟಗಾರರು ಹೆಸರು ನೋಂದಾಯಿಸಿಕೊಂಡಿದ್ದು, ಈ ತಂಡಕ್ಕೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ತರಗತಿಗಳು ಆರಂಭವಾಗಿದೆ. ಮೂರನೇ ತಂಡದ ತರಬೇತಿಗೆ 20 ಮಂದಿ ಹೆಸರು ನೋಂದಾಯಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ತರಗತಿ ಆರಂಭವಾಗಲಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಬಿ.ಎಸ್. ರಮೇಶ್ ಮಾಹಿತಿ ನೀಡಿದರು.