ಆಲೂರುಸಿದ್ಧಾಪುರ, ಜೂ. 14: ಇಲ್ಲಿಗೆ ಸಮೀಪದ ಬೆಳ್ಳಾರಳ್ಳಿಯಿಂದ ಶಿರಂಗಾಲ ಹಾಗೂ ಹಂಡ್ಲಿ ಸಂಪರ್ಕ ಕಲ್ಪಿಸುವ ತಿರುವು ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಾರ್ಗ ಸೂಚಿಯನ್ನು ಅಳವಡಿಸಿದ್ದು, ಇದರಲ್ಲಿ ಕನ್ನಡದ ಕಡೆಗಣೆಯಾಗಿದೆ.

ಲೋಕೋಪಯೋಗಿ ಇಲಾಖೆ ಎಂದು ನಮೂದಿಸಬೇಕಾದ ಸ್ಥಳದಲ್ಲಿ ಲೋಪಯೋಗಿ ಇಲಾಖೆ ಎಂದು ಬರೆಯಲಾಗಿದೆ ಇದು ಅಳವಡಿಸಿ ಅನೇಕ ದಿನಗಳೇ ಕಳೆದಿದೆ. ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು ಪ್ರತಿ ನಿತ್ಯ ಈ ರಸ್ತೆಯಲ್ಲಿ ಒಡಾಡುತ್ತಾರೆ ಅದರೆ ಈ ಲೋಪವನ್ನು ಸರಿಪಡಿಸದಿರುವದು ವಿಪರ್ಯಾಸ.

ಯಾವ ಲೋಪಯೋಗಿ ಹೊಸ ಇಲಾಖೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಈ ಮಾರ್ಗ ಸೂಚಿ ಇರುವದು ಶನಿವಾರಸಂತೆಯಿಂದ ಅರಕಲಗೂಡು ಮಾರ್ಗವಾಗಿ ಬೆಂಗಳೂರು ಹಾಗೂ ಹಾಸನಕ್ಕೆ ತೆರಳುವ ಮುಖ್ಯ ರಸ್ತೆಯ ಬದಿಯಲ್ಲಿ. ಕರ್ನಾಟಕದಲ್ಲಿ ಕನ್ನಡವನ್ನು ಈ ರೀತಿ ಮಾಡುವದು ಎಷ್ಟು ಸರಿ?

- ಚಿತ್ರ - ವರದಿ : ದಿನೇಶ್ ಮಾಲಂಬಿ