ಕೂಡಿಗೆ, ಜೂ. 14: ನಮ್ಮ ನಾಡು, ನುಡಿ, ಸಂಸ್ಕøತಿಯ ಜೊತೆಗೆ ಭಾಷಾಭಿಮಾನ ಬೆಳೆಸಿಕೊಂಡಾಗ ಮಾತ್ರ ಕಲೆಯ ಬೆಳವಣಿಗೆಯಾಗಲು ಸಾಧ್ಯ. ಆ ಮೂಲಕ ಅಡಗಿರುವ ಸಂಸ್ಕøತಿಯನ್ನು ಬಾಹ್ಯವಾಗಿ ಕೊಂಡೊಯ್ಯಲು ಇಲಾಖೆ ಹತ್ತು ಹಲವು ಯೋಜನೆಗಳನ್ನು ಕೈಗೊಂಡಿರುವದು ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಹೇಳಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣಜೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕøತಿಕ ಸೌರಭ ಕಾರ್ಯಕ್ರಮದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ನಾಡು ಹಳ್ಳಿಗಳ ನಾಡು, ದೇಶದ ಸಂಸ್ಕøತಿ ಭವ್ಯ ಪರಂಪರೆಯ ಜೊತೆಗೆ ನಾನಾ ಸಂಸ್ಕøತಿಯನ್ನು ಹೊಂದಿರುವ ಬೀಡಾಗಿದೆ. ವಿವಿಧೆಯಲ್ಲಿ ಏಕತೆಯನ್ನು ಹೊಂದಲು ನಮ್ಮ ಸಂಸ್ಕøತಿಯೇ ಕಾರಣ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಅರ್. ಶ್ರೀನಿವಾಸ್ ಮಾತನಾಡಿ, ಸಂಸ್ಕøತಿಯನ್ನು ಪ್ರತಿಬಿಂಭಿಸುವ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ನಡೆಯುವಂತಾಗಬೇಕು. ಆ ಮೂಲಕ ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕøತಿ ಸಾಹಿತ್ಯದ ಬಗ್ಗೆ ಅರಿವು ಮೂಡಿಸಿ ಮುಂದಿನ ಪೀಳಿಗೆಗೆ ಸಂಸ್ಕøತಿಯನ್ನು ಪರಿಚಯಿಸುವಂತೆ ಆಗಬೇಕೆಂದರು.

ತಾಲೂಕು ಪಂಚಾಯಿತಿ ಸದಸ್ಯ ಎನ್.ಎಸ್. ಜಯಣ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹಿಂದಿದ್ದ ಕ್ರೀಡೆ, ಕಲೆ ಮರೆಯಾಗುತ್ತಿದ್ದು ಅವುಗಳನ್ನು ಉಳಿಸಲು ಯುವ ಜನಾಂಗ ಮುಂದೆ ಬರಬೇಕೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಎಸ್. ರಮೇಶ್ ಮಾತನಾಡಿ, ಬಡತನದಿಂದ ಬಂದ ಕಲಾವಿದರುಗಳಿಗೆ ಸರಕಾರ ನೆರವನ್ನು ನೀಡುವಂತಾಗಬೇಕು. ಸೌಲಭ್ಯಗಳ ಸದುಪಯೋಗವನ್ನು ಕಲಾವಿದರು ಪಡೆದುಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಶೃತಿ, ಗ್ರಾಮದ ಹಿರಿಯರಾದ ಗುರುಲಿಂಗಪ್ಪ, ಎಸ್.ಪಿ. ಕೃಷ್ಣಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಂ.ಪಿ. ಸುರೇಶ್, ಗ್ರಾಮದ ಅಧ್ಯಕ್ಷ ಟಿ.ಎಂ. ಚಂದ್ರಪ್ಪ, ಕಾರ್ಯದರ್ಶಿ ಎಂ.ಕೆ. ಶಶಿಧರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಎನ್. ಮಂಜುನಾಥ, ಹಾಲು ಉತ್ಪಾದಕರ ಸಹಕಾರ ಸಂಘದ ಎಂ.ಎಂ. ಶಿವರಾಂ, ಎಂ.ಎನ್. ಮೂರ್ತಿ, ಶಿವಮೂರ್ತಿ, ಎಸ್.ಎ. ಅಣ್ಣಯ್ಯ, ಎಂ.ಪಿ. ರಾಜಶೇಖರ, ಸಿ.ಎನ್. ಶಿವಣ್ಣ, ತಿಮ್ಮೇಗೌಡ, ಮಲ್ಲಿಕಾರ್ಜುನ, ಎಂ.ಪಿ. ಶಿಕ್ಷಕ ಕೇಶವಮೂರ್ತಿ, ಶಿರಂಗಾಲ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ, ಕಾರ್ಯದರ್ಶಿ ಸಿ.ಎನ್. ಲೋಕೇಶ್, ಎಸ್.ಹೆಚ್. ಗಣೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್, ಜಿಲ್ಲಾ ನೇಕಾರರ ಸಮುದಾಯ ಒಕ್ಕೂಟದ ಅಧ್ಯಕ್ಷ ಟಿ.ಕೆ. ಪಾಂಡುರಂಗ, ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ.ಎಸ್. ಕೃಷ್ಣೇಗೌಡ ವೇದಿಕೆಯಲ್ಲಿದ್ದರು. ಸಾಂಸ್ಕøತಿಕ ಸೌರಭದ ಅಂಗವಾಗಿ ಡೊಳ್ಳುಕುಣಿತ, ಕಂಸಾಳೆ ನೃತ್ಯ, ಸುಗಮ ಸಂಗೀತ, ಜಾನಪದ ಗೀತ ಗಾಯನ, ಭಾವಗೀತೆ, ಭಕ್ತಿಗೀತೆ, ಕಥಾಕೀರ್ತನೆ, ವಾದ್ಯ ಸಂಗೀತ ಮುಂತಾದ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು.