ವೀರಾಜಪೇಟೆ, ಜೂ.14: ಅರ್ಹ ಫಲಾನುಭವಿಗಳಿಗೆ ಸರಕಾರದ ಮೂಲ ಸೌಲಭ್ಯಗಳನ್ನು ಒದಗಿಸಲು ಸರಕಾರದ ಎಲ್ಲ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಜನ ಸಂಪರ್ಕ ಸಭೆಗೆ ಸೆಸ್ಕ್ ಹಾಗೂ ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಗೈರು ಹಾಜರಾಗಿರು ವದಕ್ಕೆ ಇಲಾಖೆಗಳ ಬೇಜವಾಬ್ದಾರಿ ಕಾಣುತ್ತಿದೆ. ಎರಡು ಇಲಾಖೆಗಳ ಅಧಿಕಾರಿಗಳು ಪ್ರತ್ಯೇಕ, ಪ್ರತ್ಯೇಕವಾಗಿ ಜನಸಂಪರ್ಕ ಸಭೆ ನಡೆಸುವಂತೆ ಆದೇಶಿಸುವದಾಗಿ ವಿನ್ಸೆಂಟ್ ಡಿಸೋಜ ಹೇಳಿದರು.

ವೀರಾಜಪೇಟೆಯಲ್ಲಿ ಜನ ಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸಭೆಯಲ್ಲಿ ಸಾರ್ವಜನಿಕರು ನೀಡಿದ ಅಹವಾಲು ಗಳನ್ನು ಸಹಾನುಭೂತಿ ಯಿಂದ ಪರಿಶೀಲಿಸಿ ಒಂದು ತಿಂಗಳ ಅವಧಿಯಲ್ಲಿ ಕಾನೂನು ವ್ಯಾಪ್ತಿ ಗೊಳಪಟ್ಟು ಈಡೇರಿಸಲಾಗು ವದು. ಸಮಸ್ಯೆಗಳಿಗೂ ಪರಿಹಾರ ಒದಗಿ¸ Àಲಾಗುವದು. ಸಾರ್ವಜನಿಕರ ಯಾವದೇ ರೀತಿಯ ಬೇಡಿಕೆ, ಮನವಿಗಳಿಗೆ ನೇರವಾಗಿ ಸ್ಪಂದಿಸಲು ಕ್ರಮ ಕೈಗೊಳ್ಳಲಾಗುವದು ಎಂದರಲ್ಲದೆ, ಎರಡು ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿರುವದಕ್ಕೆ ವಿಷಾದ ವ್ಯಕ್ತ ಪಡಿಸಿದರು.

ಜನ ಸಂಪರ್ಕ ಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಮಾತನಾಡಿ ಹೆಗ್ಗಳ, ಕೆದಮುಳ್ಳೂರು ಸುತ್ತಮುತ್ತಲ ಗ್ರಾಮಗಳಲ್ಲಿ ಪೈಸಾರಿ ಹಾಗೂ ಸಿ&amdiv;ಡಿ ಭೂಮಿಯಲ್ಲಿ ಮನೆ ಕಟ್ಟಿಕೊಂಡ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುತ್ತಿಲ್ಲ. ಇದರಿಂದಾಗಿ ಈ ನಿವಾಸಿಗಳಿಗೆ ಗ್ರಾಮ ಪಂಚಾಯಿತಿಯ ಯಾವದೇ ಮೂಲ ಸೌಲಭ್ಯಗಳು ದೊರೆಯುತ್ತಿಲ್ಲ. ಇದಕ್ಕೆ ಸಂಬಂಧಿಸಿ ದಂತೆ ಜಿಲ್ಲಾಧಿಕಾರಿಗಳು ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿಯ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ಎಂ.ಎಂ.ರವೀಂದ್ರ ಅವರು ತಾಲೂಕಿನಲ್ಲಿ 29 ಇಲಾಖೆಗಳ ಅಧಿಕಾರಿಗಳಿದ್ದರೂ ಜನ ಸಂಪರ್ಕ ಸಭೆಗೆ ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಜರಾಗಿದ್ದಾರೆ. ಅಧಿಕಾರಿಗಳಿಗೆ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಲು ಆಸಕ್ತಿ ಇಲ್ಲ. ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಯವರು ಸೂಕ್ತ ಕ್ರಮ ಜರುಗಿಸ ಬೇಕೆಂದು ಒತ್ತಾಯಿಸಿದರು. ಇಲ್ಲಿನ ತಾಲೂಕು ಕಚೇರಿಯಲ್ಲಿ ಅತಿಯಾಗಿ ದಳ್ಳಾಳಿಗಳ ಹಾವಳಿ ಹೆಚ್ಚಾಗಿದೆ. ಈ ಕಚೇರಿಯನ್ನು ದಳ್ಳಾಳಿಗಳಿಂದ ಮುಕ್ತಗೊಳಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದರು.

ವೀರಾಜಪೇಟೆ ತಾಲೂಕಿನಲ್ಲಿ ಕಂದಾಯ ಇಲಾಖೆಯಲ್ಲಿ ವಿಳಂಬ ವಾಗಿ ಆರ್.ಟಿ.ಸಿ ವಿತರಿಸ ಲಾಗುತ್ತಿದೆ. ತಾಲೂಕಿನ ರೈತರಿಗೆ ಆರ್.ಟಿ.ಸಿ ಇಲ್ಲದೆ ಯಾವದೇ ಕಡತಗಳು ವಿಲೇವಾರಿಯಾಗುವದಿಲ್ಲ. ಆರ್.ಟಿ.ಸಿ ನೀಡಿದರೂ ಅದು ಲೋಪ ದೋಷದಿಂದ ಕೂಡಿರುತ್ತದೆ. ಕೇಂದ್ರ ಸರಕಾರದಿಂದ ಕರಿಮೆಣಸು ಫಸಲಿಗಾಗಿ ಸೌಲಭ್ಯದ ಪ್ಯಾಕೇಜ್ ಯೋಜನೆಯೊಂದನ್ನು ಜಾರಿಗೆ ತರಲಾಗಿದೆ. ಆದರೆ ಆರ್.ಟಿ.ಸಿಯಲ್ಲಿ ಕಂದಾಯ ಇಲಾಖೆ ಮೂರು ತಿಂಗಳಿಗೊಮ್ಮೆ ಫಸಲನ್ನು ತನ್ನ ಇಚ್ಚೆಯಂತೆ ಬದಲಾಯಿಸುವದರಿಂದ ಸರಕಾರದ ಈ ಪ್ಯಾಕೇಜ್ ಕೊಡಗಿನ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಕೇರಳದ ಇಡುಕ್ಕಿ ಜಿಲ್ಲೆಯ ಕರಿಮೆಣಸು ಬೆಳೆಗಾರರು ಇದರ ಪೂರ್ಣ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಅಸಿಸ್ಟೆಂಟ್ ಕಮೀಷನರ್ ನಂಜುಂಡ ಸ್ವಾಮಿ ಅವರು ಕಳೆದ 2001ರಿಂದಲೇ ಆರ್.ಟಿ.ಸಿಯಲ್ಲಿ ಬದಲಾವಣೆ ತರಲಾಗಿದೆ. ಇದನ್ನು ಕಂದಾಯ ಇಲಾಖೆ ಅಧಿಕಾರಿಗಳು ನೋಡಿ ಸರಿಪಡಿಸಬೇಕು ಎಂದು ಹೇಳಿದರು.

ನಾಂಗಾಲ ಗ್ರಾಮದ ಬೊಪ್ಪಂಡ ಮನು ಮಾತನಾಡಿ ನಾಂಗಾಲ ಗ್ರಾಮದಲ್ಲಿ ಬೆಳಿಗ್ಗೆ 5 ಕಾಡಾನೆಗಳು ಕಾಣಿಸಿಕೊಂಡು ಗ್ರಾಮಸ್ಥರನ್ನು ಭಯ ಭೀತಗೊಳಿಸಿವೆ. ಅರಣ್ಯ ಇಲಾಖೆ ಯವರು ಅವೈಜ್ಞಾನಿಕ ಕಂದಕಗಳನ್ನು ತೆಗೆಯುತ್ತಿದ್ದಾರೆ. ಇದರಿಂದ ಯಾವದೇ ಪ್ರಯೋಜನವಾಗುವದಿಲ್ಲ ಎಂದು ಹೇಳಿದಾಗ ಜಿಲ್ಲಾಧಿಕಾರಿಯವರು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್.ದಾಮೋದರ್ ಮಾತನಾಡಿ ಬಿಟ್ಟಂಗಾಲ, ನಾಂಗಾಲ ಸುತ್ತ ಮುತ್ತ ನಿರಂತರ ದನಗಳನ್ನು ಕಳವು ಮಾಡಿ ಕೇರಳದ ಕಸಾಯಿ ಖಾನೆಗೆ ಸಾಗಿಸಲಾಗುತ್ತಿದೆ. ದನ ಕಳವು ಮಾಡಿ ಕೇರಳಕ್ಕೆ ಸಾಗಿಸುತ್ತಿರುವ ಚನ್ನನಕೋಟೆಯ ವ್ಯಕ್ತಿಯೋರ್ವನ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದೇವೆ. ಆತನನ್ನು ಪತ್ತೆ ಹಚ್ಚಿ ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರಲ್ಲದೆ, ಎರಡು ದಿನಗಳ ಹಿಂದೆ ಅಂಬಟ್ಟಿ ಗ್ರಾಮದಲ್ಲಿ ಹೈಟೆನ್ಶನ್ ವಿದ್ಯುತ್ ಹರಿದು ಮೂರು ದನಗಳು ಅಸು ನೀಗಿವೆ. ಇದರ ಬಗ್ಗೆ ವೀರಾಜಪೇಟೆ ಚೆಸ್ಕಾಂ ಅಧಿಕಾರಿಗಳು ಪೂರ್ಣವಾಗಿ ನಿರ್ಲಕ್ಷ್ಯ ತಾಳಿರುವದರ ಕುರಿತು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ದನ ಕಳುವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ ಅವರು ದನ ಕಳ್ಳರನ್ನು ಪತ್ತೆ ಹಚ್ಚಲು ಪ್ರತ್ಯೇಕ ತಂಡವನ್ನು ರಚಿಸಲಾಗಿದ್ದು ಕೆಲವರ ಸುಳಿವು ಸಿಕ್ಕಿದೆ. ವಿಚಾರಣೆಗೊಳಪಡಿಸಿ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.

ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ ಮಾತನಾಡಿ ಕೆ.ಬೋಯಿಕೇರಿಯಲ್ಲಿ ನೀರು ಪೊರೈಕೆಗೆ ಎಷ್ಟು ಬೋರ್ ವೆಲ್‍ಗಳು ತೆಗೆದರೂ ನೀರಿಲ್ಲದೆ ವಿಫಲಗೊಳ್ಳುತ್ತಿದೆ. ಈಗಾಗಲೇ ಸುಮಾರು 60ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿಗಾಗಿ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಇದಕ್ಕಿಂತಲೂ ಕದನೂರು ಹೊಳೆಯಿಂದ ಕೆ.ಬೋಯಿಕೇರಿಗೆ ನೀರು ಪೊರೈಸಿದರೆ ಸುಮಾರು 3000 ಜನಸಂಖ್ಯೆಗೆ ಶಾಶ್ವತವಾಗಿ ನೀರು ದೊರೆಯಲಿದೆ ಎಂದರಲ್ಲದೆ ಕೆದಮುಳ್ಳೂರು ಸುತ್ತ ಮುತ್ತಲಿನ ಪ್ರದೇಶದಲ್ಲಿ ಕಾಡಾನೆ ಧಾಳಿ ವಿಪರೀತವಾಗಿದೆ ಎಂದು ದೂರಿದರು. ದಿಡ್ಡಳ್ಳಿ ನಿರಾಶ್ರಿತರಿಗೆ ಕೆದಮುಳ್ಳೂರು ಗ್ರಾಮದಲ್ಲಿ ವಸತಿ ಸಮೇತ ನಿವೇಶನ ನೀಡಲು ಯೋಜನೆ ರೂಪಿಸಲಾಗಿದೆ. ಆದರೆ ದಿಡ್ಡಳ್ಳಿ ನಿರಾಶ್ರಿತರು ಈ ಕಾಲೋನಿಗೆ ಬರುವದಿಲ್ಲ ಎಂದು ಸಬೂಬು ಹೇಳತ್ತಿರುವದರಿಂದ ಈ ನಿವೇಶನಗಳನ್ನು ವಿವಿಧ ಗ್ರಾಮ ಗಳಲ್ಲಿರುವ ನಿರ್ಗತಿಕ ಫಲಾನುಭವಿ ಗಳಿಗೆ ನೀಡಬೇಕು ಎಂದರು. ಕುಡಿಯುವ ನೀರು ಹಾಗೂ ಕಾಡಾನೆ ಧಾಳಿ ನಿಯಂತ್ರಣಕ್ಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸುವದಾಗಿ ಜಿಲ್ಲಾಧಿಕಾರಿ ಹೇಳಿದರು.

ಕಾಫಿ ಮಂಡಳಿ ಉಪಾಧ್ಯಕ್ಷೆ, ಜಿಲ್ಲಾ ಕಾವೇರಿ ಸ್ವಚ್ಚತಾ ಆಂದೋಲನದ ಸಂಚಾಲಕಿ ರೀನಾ ಪ್ರಕಾಶ್ ಮಾತನಾಡಿ ಕೊಡಗಿನಲ್ಲಿ ಕಾವೇರಿ ಹರಿಯುವ ಹೊಳೆ ನದಿಗಳಿಗೆ ಪಟ್ಟಣದ ಮಲಿನ ನೀರು ಹರಿದು ಅಶುಚಿತ್ವಗೊಳ್ಳುತ್ತಿರುವದನ್ನು ತಡೆಯಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.

ಭಾರತೀಯ ಕಿಸಾನ್ ಸಂಘಟನೆಯ ಕೊಡಗು ಜಿಲ್ಲಾ ಶಾಖೆಯ ಜಿಲ್ಲಾ ಸಮಿತಿಯ ಸಂಚಾಲಕ ರಾಜೀವ್ ಬೋಪಯ್ಯ ಮಾತನಾಡಿ ಎಡಿಎಲ್‍ಆರ್ ವಾರಕ್ಕೊಮ್ಮೆಯೂ ಬರುವದಿಲ್ಲ. ಇದರಿಂದ ತಾಲೂಕಿನ ರೈತರಿಗೆ ತೊಂದರೆಯಾಗುತ್ತಿದೆ. ತಾಲೂಕು ಕಚೇರಿ ಸೇರಿದಂತೆ ಯಾವದೇ ಗ್ರಾಮ ಪಂಚಾಯಿತಿಯಲ್ಲಿ ಆರ್.ಟಿ.ಸಿ ಕೇಳಿದರೆ ಸರಕಾರದಿಂದ ಖಾಲಿ ಪೇಪರ್ ಸರಬರಾಜಿಲ್ಲ ಎಂದು ಸಂಬಂಧಿಸಿದ ಗುಮಾಸ್ತರು ತಿಳಿಸುವದರಿಂದ ಕುಟ್ಟ, ಬಿರುನಾಣಿ ಸೇರಿದಂತೆ ವಿವಿಧೆಡೆಗಳಿಂದ ಆರ್‍ಟಿ.ಸಿಗಾಗಿ ವೀರಾಜಪೇಟೆಗೆ ಬಂದಂತಹ ರೈತರು, ಕಾರ್ಮಿಕರಿಗೆ ತೊಂದರೆಯಾಗುತ್ತಿದೆ ಇದನ್ನು ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಮಾತನಾಡಿ ಕೃಷಿ ಇಲಾಖೆಯ ಕೃಷಿ ಭಾಗ್ಯ ಯೋಜನೆಯಲ್ಲಿ ರೈತರಿಗೆ ಕೃಷಿ ಹೊಂಡ ಸೌಲಭ್ಯ ಹಾಗೂ ಕೃಷಿ ಪರಿಕರಗಳ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಫಲಾನುಭವಿಗಳಿಗೆ ಸಲಹೆ ನೀಡಿದರು. ಜನ ಸಂಪರ್ಕ ಸಭೆಯಲ್ಲಿ ಸುಮಾರು 70 ಮಂದಿಗೆ ನಿವೇಶನದ ಹಕ್ಕು ಪತ್ರಗಳನ್ನು, ಸಾಮಾಜಿಕ ಭದ್ರತೆಯ ದೃಢೀಕರಣ ಪತ್ರವನ್ನು ವಿತರಿಸಲಾಯಿತು.

ಜಿಲ್ಲಾಧಿಕಾರಿ ರಿರ್ಚಡ್ ವಿನ್ಸೆಂಟ್ ಅವರು ಎರಡು ತಿಂಗಳಿಗೊಮ್ಮೆ ಯಾದರೂ ತಾಲೂಕು ಕಚೇರಿ ದಿಢೀರ್ ಭೇಟಿ ನೀಡಿದರೆ ಅಧಿಕಾರಿ ಗಳು ಹಾಗೂ ಸಿಬ್ಬಂದಿಗಳು ತಾಲೂಕಿನ ರೈತರು, ಫಲಾನುಭವಿಗಳಿಗೆ ಕೊಡುವ ಕಿರುಕುಳ, ಕರ್ತವ್ಯದ ನಿರ್ಲಕ್ಷ್ಯವನ್ನು ಪ್ರತ್ಯಕ್ಷವಾಗಿ ಪತ್ತೆ ಹಚ್ಚಬಹುದು ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು. ಜನ ಸಂಪರ್ಕ ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಪಟ್ಟಣದ ನಿವಾಸಿಗಳು ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.