ಮಡಿಕೇರಿ, ಜೂ. 15: ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪಶೆಟ್ಟಳ್ಳಿ ಗ್ರಾಮದಲ್ಲಿ ಅನೇಕ ವರ್ಷಗಳ ಹಿಂದೆ ಎಮ್ಮೆಗುಂಡಿಯಲ್ಲಿ ಸಭಾಭವನ ನಿರ್ಮಿಸುವ ಮೂಲಕ ಗ್ರಾಮೀಣ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಪ್ರಯತ್ನ ನಡೆದಿತ್ತು. ಸ್ಥಳೀಯ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೇರಿದಂತೆ ಜಿ.ಪಂ., ತಾ.ಪಂ. ಪ್ರತಿನಿಧಿಗಳು ಸೇರಿ ಒಂದಿಷ್ಟು ಹಣ ಒದಗಿಸಿದರಲ್ಲಿ ಅಡಿಪಾಯದೊಂದಿಗೆ ಗೋಡೆಗಳನ್ನು ನಿರ್ಮಿಸಲಾಯಿತು. ಆ ಬಳಿಕ ಹಣದ ಮುಗ್ಗಟ್ಟಿನಿಂದ ಈ ಸಮುದಾಯ ಭವನದ ಕೆಲಸ ನಿಂತು ಹೋಗಿ, ನಾಲ್ಕಾರು ವರ್ಷಗಳು ಕಳೆದು ಇದೀಗ ಕಾಡು ಪಾಲಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಈ ಸಮುದಾಯ ಭವನಕ್ಕೆ ಹಣ ಒದಗಿಸಿ ಕೆಲಸ ಪೂರೈಸಿಕೊಟ್ಟರೆ, ಗ್ರಾಮೀಣ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಿಗೆ ಉತ್ತೇಜನ ಲಭಿಸಲಿದ್ದು, ಇನ್ನಾದರೂ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟವರು ಗಮನ ಹರಿಸುವಂತೆ ಅಪ್ಪಶೆಟ್ಟಳ್ಳಿ ಹಾಗೂ ಸುತ್ತಮುತ್ತಲಿನ ನಿವಾಸಿಗಳು ‘ಶಕ್ತಿ’ಗೆ ನೀಡಿರುವ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.