ಸೋಮವಾರಪೇಟೆ, ಜೂ. 15: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳುವ ರಸ್ತೆ ಕೆಸರುಮಯವಾಗಿದ್ದು, ಕಚೇರಿಗೆ ತೆರಳುವ ಸಿಬ್ಬಂದಿಗಳು ಮತ್ತು ಶಿಕ್ಷಕರು ಪರದಾಡುವಂತಾಗಿದೆ.ಸಮೀಪದಲ್ಲಿರುವ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಮೈದಾನದ ಬರೆಯ ಮಣ್ಣು ಮಳೆಗೆ ಕೊಚ್ಚಿ ಬಂದು ರಸ್ತೆಯಲ್ಲಿ ಶೇಖರಣೆಯಾಗುತ್ತಿದೆ. ಪ್ರತಿವರ್ಷ ಇದೇ ಸಮಸ್ಯೆ ಎದುರಾಗುತ್ತಿದ್ದು, ಜನಪ್ರತಿನಿಧಿಗಳಿಗೆ ಸಮಸ್ಯೆಯ ಅರಿವಿದ್ದರೂ ಸೂಕ್ತ ಅನುದಾನ ಕಲ್ಪಿಸುತ್ತಿಲ್ಲ ಎಂದು ಶಿಕ್ಷಕರುಗಳು ಆರೋಪಿಸಿದ್ದಾರೆ.

ಸರ್ಕಾರಿ ಶಾಲೆಗಳ ಕಲ್ಪಿಸುತ್ತಿಲ್ಲ ಎಂದು ಶಿಕ್ಷಕರುಗಳು ಆರೋಪಿಸಿದ್ದಾರೆ.

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರಬರಾಜು ಮಾಡುವ ಪುಸ್ತಕಗಳು ಸೇರಿದಂತೆ ಇತರೆ ಸಾಮಗ್ರಿಗಳು ಬಿಇಓ ಕಚೇರಿ ತಲಪಬೇಕು. ಇಲ್ಲಿಂದಲೇ ಶಾಲೆಗಳಿಗೆ ಪುಸ್ತಕಗಳು ಸರಬರಾಜು ಆಗಬೇಕು. ಲಾರಿಗಳು ಈ ರಸ್ತೆಯಲ್ಲಿ ತೆರಳಲು ಹರಸಾಹಸ ಪಡಬೇಕಾಗಿದೆ. ಮಳೆಗಾಲದಲ್ಲಿ ಕಚೇರಿ ಸಿಬ್ಬಂದಿಗಳು ಬೇರೆ ಕಡೆ ವಾಹನಗಳನ್ನು ನಿಲ್ಲಿಸಿ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮೈದಾನದ ಬರೆಗೆ ತಡೆಗೋಡೆ ನಿರ್ಮಿಸಿದರೆ ರಸ್ತೆ ಅಗಲವಾಗುತ್ತದೆ. ಕೂಡಲೆ ಜನಪ್ರತಿನಿಧಿಗಳು ಅನುದಾನ ಕಲ್ಪಿಸಬೇಕು ಎಂದು ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಸುರೇಶ್‍ಶೆಟ್ಟಿ ಒತ್ತಾಯಿಸಿದ್ದಾರೆ.