ಮಡಿಕೇರಿ, ಜೂ. 15: ಕರ್ನಾಟಕ ರಾಜ್ಯ ಇಸ್ಲಾಂ ಧಾರ್ಮಿಕ ವಿದ್ಯಾಭ್ಯಾಸ ಸಂಸ್ಥೆಯ 5, 7, 10 ಮತ್ತು 17ನೇ ತರಗತಿಗಳ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಪಾಲಿಬೆಟ್ಟ ಹಾಗೂ ಹುಂಡಿ ಮದ್ರಸಗಳ ವಿದ್ಯಾರ್ಥಿಗಳು ಹೆಚ್ಚಿನ ಸ್ಥಾನಗಳನ್ನು ಪಡೆದು ಸಾಧನೆ ಮಾಡಿದ್ದು, ಹೆಣ್ಣುಮಕ್ಕಳು ಮೇಲುಗೈ ಸಾಧಿಸಿದ್ದಾರೆ.

5ನೇ ತರಗತಿಯಲ್ಲಿ ಕಕ್ಕಬೆ ವಯಕೋಲ್‍ನ ರವುಲತುಲ್ ಉಲೂಂ ಮದ್ರಸದ ವಿದ್ಯಾರ್ಥಿನಿ ಆಯಿಶತು ಸುಮೈರ ಪ್ರಥಮ ಸ್ಥಾನ ಗಳಿಸಿದ್ದು, ಹುಂಡಿ ಹಯಾತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿನಿ ಸಜ್‍ನಾ ದ್ವಿತೀಯ ಹಾಗೂ ಇದೇ ಮದ್ರಸದ ಕೆ.ಎನ್. ಸಲಹ ತೃತೀಯ ಸ್ಥಾನ ಪಡೆದಿದ್ದಾರೆ.

7ನೇ ತರಗತಿಯಲ್ಲಿ ಪಾಲಿಬೆಟ್ಟದ ಎಂ.ಡಿ.ಎಂ. ಮದ್ರಸದ ವಿದ್ಯಾರ್ಥಿನಿ ಫಸ್‍ನಾ ಪ್ರಥಮ ಸ್ಥಾನಗಳಿಸಿದ್ದು, ಗುಂಡಿಕೆರೆ ಹಯಾತುಲ್ ಇಸ್ಲಾಂ ಮದ್ರಸದ ಮೊಹಮ್ಮದ್ ಖಾಸಿಂ ದ್ವಿತೀಯ ಸ್ಥಾನ ಗಳಿಸಿದ್ದು, ಕೊಳಕೇರಿಯ ಡಿ.ಐ.ಎಂ. ಮದ್ರಸದ ವಿದ್ಯಾರ್ಥಿನಿ ಸುಹೈಮಾ ಎಂ.ಎಂ. ಹಾಗೂ ಬೇಂಗೂರಿನ ಎಂ.ಐ.ಎಂ. ಮದ್ರಸದ ವಿದ್ಯಾರ್ಥಿ ಪಿ.ಯು. ಮೊಹಮದ್ ಅಸ್ಲಂ ತೃತೀಯ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ.

10ನೇ ತರಗತಿಯಲ್ಲಿ ಹುಂಡಿ ಹೆಚ್.ಐ.ಎಂ. ಮದ್ರಸದ ಸಫ್ರೀನಾ ಕೆ.ಎಸ್. ಪ್ರಥಮ ಸ್ಥಾನಗಳಿಸಿದ್ದು, ಕೊಂಡಂಗೇರಿಯ ಹೆಚ್.ಐ.ಎಂ. ಮದ್ರಸದ ಶರ್ಮಿಲ ಪಿ.ಯು. ದ್ವಿತೀಯ ಸ್ಥಾನಗಳಿಸಿದ್ದು, ಹೊಸತೋಟ ಹೆಚ್.ಎ. ನಫೀಸತುಲ್ ಮಿಸ್ರಿಯಾ ತೃತೀಯ ಸ್ಥಾನ ಗಳಿಸಿದ್ದಾರೆ.

12ನೇ ತರಗತಿಯಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಾಲಿಬೆಟ್ಟದ ಎಂ.ಡಿ.ಎಂ. ಮದ್ರಸದ ವಿದ್ಯಾರ್ಥಿಗಳಾದ ಸಿ.ಜೆ. ಮೊಹಮದ್ ಜಾಬಿರ್, ಎಂ.ಜಿ. ಅಫ್ರೀದ್ ಮತ್ತು ಕೆ.ಎಲ್. ಶಫೀಕ್ ಕ್ರಮವಾಗಿ ಪಡೆದುಕೊಂಡಿದ್ದಾರೆ ಎಂದು ಕೆ.ಆರ್.ಐ.ಡಿ.ವಿ.ಎಸ್.ನ ಕಾರ್ಯದರ್ಶಿ ಕೆ.ಎಸ್. ಶಾದುಲಿ ಫೈಝಿ ತಿಳಿಸಿದ್ದಾರೆ.