ಮಡಿಕೇರಿ, ಜೂ. 15: ಇತ್ತೀಚೆಗೆ ಸಾಯಿಶಂಕರ ಬಿ.ಇಡಿ ಪ್ರಶಿಕ್ಷಣಾ ರ್ಥಿಗಳು ಪಾಲಿಬೆಟ್ಟದಲ್ಲಿರುವ ವಿಕಲಚೇತನ ಮಕ್ಕಳ ವಿಕಾಸ ಮತ್ತು ಬೆಳವಣಿಗೆಗೆ ಶ್ರಮಿಸುತ್ತಿರುವ ಚೆಸೈರ್ ಹೋಂ ಇಂಡಿಯನ್ ಕೂರ್ಗ್‍ಗೆ ಭೇಟಿ ನೀಡಿ, ಅಲ್ಲಿನ ಮಕ್ಕಳು, ಉಪನ್ಯಾಸಕರುಗಳೊಂದಿಗೆ ಬೆರೆತು ಆ ಮಕ್ಕಳಲ್ಲಿನ ಮುಗ್ಧತೆ, ಸೃಜನಶೀಲತೆ, ಶಿಕ್ಷಕರಲ್ಲಿನ ತಾಳ್ಮೆ, ವಿದ್ಯಾರ್ಥಿಗಳಲ್ಲಿರುವ ವಿವಿಧ ಕೌಶಲ್ಯಗಳು, ಅಲ್ಲಿರುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿಕೊಂಡರು. ಅಲ್ಲದೆ ಶಿಕ್ಷಣ ವೃತ್ತಿಯಲ್ಲಿ ಎದುರಾಗಬಹುದಾದ ಇಂತಹ ಸವಾಲುಗಳುಳ್ಳ ಮಕ್ಕಳ ಬಗ್ಗೆ ಅರಿವು ಪಡೆದುಕೊಂಡರು. ಈ ವೇಳೆ ಪ್ರಶಿಕ್ಷಣಾರ್ಥಿಗಳು ಮತ್ತು ಅಲ್ಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಆಟೋಟಗಳಲ್ಲಿ ಭಾಗವಹಿಸಿ ಪರಸ್ಪರ ಬೆರೆತು ಹರ್ಷಗೊಂಡರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಬೀರೇಗೌಡರು ಹಾಗೂ ಕಾಲೇಜಿನ ಉಪನ್ಯಾಸಕರು ಪಾಲ್ಗೊಂಡಿದ್ದರು.