ಮಡಿಕೇರಿ, ಜೂ.16: ಪ್ರಸಕ್ತ (2017-18ನೇ) ಶೈಕ್ಷಣಿಕ ಸಾಲಿಗೆ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗೆ ದಂಡ ಶುಲ್ಕವಿಲ್ಲದೇ ದಾಖಲಾಗಲು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಾಖಲಾತಿ ದಿನಾಂಕವನ್ನು ವಿಸ್ತರಿಸಲಾಗಿದೆ.

ಪ್ರಥಮ ಪಿ.ಯು.ಸಿ. ಹಾಗೂ ದ್ವಿತೀಯ ಪಿ.ಯು.ಸಿಗೆ ದಂಡ ಶುಲ್ಕವಿಲ್ಲದೆ ದಾಖಲಾಗಲು ತಾ. 20 ಕೊನೆಯ ದಿನವಾಗಿದೆ. ವಿಳಂಬ ದಾಖಲಾತಿ ರೂ. 504 ದಂಡ ಶುಲ್ಕದೊಂದಿಗೆ ತಾ. 21 ರಿಂದ ಜುಲೈ 1 ರವರೆಗೆ, ವಿಶೇಷ ದಂಡ ಶುಲ್ಕ 2,184 ಪಾವತಿಸಿ ಜುಲೈ 3 ರಿಂದ ಜುಲೈ 12 ರವರೆಗೆ ದಾಖಲಾತಿ ಮಾಡಿಕೊಳ್ಳಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.