ಮಡಿಕೇರಿ, ಜೂ. 17 : ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿರುವ ಸ್ನಾತಕೋತ್ತರ ಪದವಿ ಕೋರ್ಸ್‍ಗಳಿಗೆ ಸಂಬಂಧಿಸಿದ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ತಿಳಿಸುವ ಉದ್ದೇಶದಿಂದ ತಾ. 20 ರಂದು ಕಾಲೇಜಿನಲ್ಲಿ ‘ತೆರೆÀದ ಮನೆ’ (ಓಪನ್ ಹೌಸ್) ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾಲೇಜಿನ ಪ್ರಾಂಶುಪಾಲೆ ಡಾ|| ಪಾರ್ವತಿ ಅಪ್ಪಯ್ಯ ಹಾಗೂ ವಿವಿಧ ವಿಭಾಗಗಗಳ ಮುಖ್ಯಸ್ಥರು, ಕಾಲೇಜಿನಲ್ಲಿ ಈಗಾಗಲೇ ಸುಮಾರು 2000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸ್ನಾತಕೋತ್ತರ ಪದವಿಗಳ ವಿವಿಧ ವಿಭಾಗಗಳಲ್ಲಿ ಸುಮಾರು 120 ಮಂದಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಮಂಗಳೂರು ವಿಶ್ವವಿದ್ಯಾನಿಲ ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿರುವ ಮಡಿಕೇರಿಯ ಎಫ್‍ಎಂಸಿ ಕಾಲೇಜು ನ್ಯಾಕ್‍ನಿಂದ ‘ಎ’ ದರ್ಜೆಯ ಕಾಲೇಜು ಎಂಬ ಮಾನ್ಯತೆಯನ್ನು ಪಡೆದಿದ್ದು, ಇದರೊಂದಿಗೆ ಯುಜಿಸಿಯಿಂದ ‘ಕಾಲೇಜ್ ವಿದ್ ಪೊಟೆÉನ್ಷಿಯಲ್ ಫಾರ್ ಎಕ್ಸಲೆನ್ಸ್’ ಎಂದು ಪರಿಗಣಿ ಸಲ್ಪಟ್ಟಿದೆ. ಇಲ್ಲಿರುವ ಸ್ನಾತಕೋತ್ತರ ಕೊರ್ಸ್‍ಗಳು ಮತ್ತು ವಿಭಾಗಗಳಲ್ಲಿ ಇರುವ ಮೂಲಭೂತ ಸೌಕರ್ಯ ಗಳು, ಸಂಶೋಧನೆಗೆ ಇರುವ ಅವಕಾಶಗಳು, ಗ್ರಂಥಾಲಯ, ಹಾಸ್ಟೆಲ್ ಸೌಲಭ್ಯ, ಉದ್ಯೋಗಾ ವಕಾಶಗಳು, ಶಿಷ್ಯವೇತನ, ಕೌಶಲ್ಯ ಅಭಿವೃದ್ಧಿಗೆ ಇರುವ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ನೀಡುವ ಉದ್ದೇಶದಿಂದ ತೆರೆದ ಮನೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

ಓಪನ್ ಹೌಸ್ ಕಾರ್ಯಕ್ರಮ ಪಾಶ್ಚಾತ್ಯ ದೇಶಗಳ ಕಲ್ಪನೆಯಾಗಿದ್ದರೂ, ಕೊಡಗಿನಂತಹ ಗುಡ್ಡಗಾಡು ಪ್ರದೇಶದಲ್ಲಿರುವ ಕಾಲೇಜಿನಲ್ಲಿ ಇರುವ ಸೌಲಭ್ಯಗಳ ಕುರಿತು ಸಮರ್ಪಕವಾದ ಮಾಹಿತಿ ಇಲ್ಲದಿರುವದರಿಂದ ಇಲ್ಲಿನ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ದೂರದ ಊರುಗಳಿಗೆ ತೆರಳುತ್ತಿದ್ದಾರೆ. ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಇಲ್ಲಿನ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಬೇಕೆಂಬದು ತಮ್ಮ ಆಶಯವಾಗಿದೆ ಎಂದು ತಿಳಿಸಿದರು.

ಕಾಲೇಜಿನಲ್ಲಿ ತಾ.20ರ ಪೂರ್ವಾಹ್ನ 10.30 ಗಂಟೆಗೆ ನಡೆಯುವ ತೆರೆದ ಮನೆ ಕಾರ್ಯಕ್ರಮವನ್ನು ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯೆ ಡಾ|| ಪುಷ್ಪಾ ಕುಟ್ಟಣ್ಣ ಉದ್ಘಾಟಿಸಲಿದ್ದು, ಜಿಲ್ಲಾ ಉದ್ಯೋಗಾಧಿಕಾರಿ ಸಿ. ಜಗನ್ನಾಥ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಜಗನ್ನಾಥ ನೆಟ್ಟಾರು, ಡಾ|| ರವಿಶಂಕರ್, ಡಾ|| ಕಮಲಾ ಕೆ.ಪಿ, ನಯನ ಕಶ್ಯಪ್, ಡಾ|| ಗಾಯತ್ರಿ ದೇವಿ ಮತ್ತಿತರರು ಹಾಜರಿದ್ದು ಮಾಹಿತಿ ನೀಡಿದರು.