ನಾಪೆÇೀಕ್ಲು, ಜೂ. 17: ಸಮೀಪದ ಕಬ್ಬಿನಕಾಡು ತಾಮರ ರೆಸಾರ್ಟ್‍ಗೆ ಭೇಟಿ ನೀಡಿದ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ರೆಸಾರ್ಟ್ ಮತ್ತು ಆದಿವಾಸಿ ಅಡಿಯ ಜನಾಂಗದವರ ನಡುವಿನ ರಸ್ತೆ ಸಮಸ್ಯೆಯನ್ನು ಬಹುತೇಕವಾಗಿ ಇತ್ಯರ್ಥಗೊಳಿಸಿದ್ದಾರೆ.ಇಂದು ತಾಮರ ರೆಸಾರ್ಟ್‍ಗೆ ಭೇಟಿ ನೀಡಿದ ಶಾಸಕರು ಅಡಿಯ ಜನಾಂಗದ ಮುಖಂಡರು ಮತ್ತು ತಾಮರ ರೆಸಾರ್ಟ್ ಆಡಳಿತದೊಂದಿಗೆ ಮಾತುಕತೆ ನಡೆಸಿದರು. ಇದರ ಪ್ರಯುಕ್ತ ತಾಮರ ರೆಸಾರ್ಟ್‍ನವರು ಅಡಿಯರಿಗೆ ಪ್ರತ್ಯೇಕ ರಸ್ತೆ ನಿರ್ಮಿಸಿಕೊಡುವ ಬಗ್ಗೆ ತಿಳಿಸಿದರು. ಅಲ್ಲಿಯವರೆಗೆ ಈ ಹಿಂದೆ ಅಡಿಯ ಜನಾಂಗದವರು ನಡೆದಾಡುತ್ತಿದ್ದ ರಸ್ತೆ ತಡೆಯನ್ನು ತೆರವುಗೊಳಿಸುವಂತೆ ಮನವೊಲಿಸಿ, ರಸ್ತೆ ತೆರವುಗೊಳಿಸುವಲ್ಲಿ ಸಫಲರಾದರು.

ಹಲವು ವರ್ಷಗಳಿಂದ ರಸ್ತೆ ಸಮಸ್ಯೆಯ ಬಗ್ಗೆ ಅಡಿಯ ಜನಾಂಗದವರು ದೂರು ನೀಡುತ್ತಲೇ ಬಂದಿದ್ದರು. ಇದಕ್ಕಾಗಿ ಕಬ್ಬಿನಕಾಡು ರಸ್ತೆಯಲ್ಲಿ, ರೆಸಾರ್ಟ್ ಬಳಿ ಪ್ರತಿಭಟನೆಗಳು ನಡೆದಿದ್ದವು. ನಿನ್ನೆ ಹಾಗೂ ಇಂದು ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲೂ ಪ್ರತಿಭಟನೆ ನಡೆದಿತ್ತು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಮಡಿಕೇರಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಬಿಜೆಪಿ ಮುಖಂಡರಾದ ಉದಿಯಂಡ ಸುರಾ ನಾಣಯ್ಯ, ಕಲಿಯಂಡ ಸುನಂದಾ, ಗ್ರಾಮ ಪಂಚಾಯಿತಿ ಸದಸ್ಯರಾದ ಮುಕ್ಕಾಟಿರ ರಮೇಶ್, ಅಪ್ಪಾರಂಡ ವಿಜು, ಸತ್ಯಾನ್ವೇಷಣೆ ಸಮಿತಿಯ ಕೇಟೋಳಿರ ಸನ್ನಿ ಸೋಮಣ್ಣ, ಪಾಂಡಂಡ ನರೇಶ್, ಗ್ರಾಮಸ್ಥರಾದ ಬಡಕಡ ಸುರೇಶ್ ಬೆಳ್ಯಪ್ಪ, ಅಂಜಪರವಂಡ ಕುಶಾಲಪ್ಪ, ಮಡಿಕೇರಿ ತಾಲೂಕು ತಹಶೀಲ್ದಾರ್ ಕುಸುಮ, ನಾಪೆÇೀಕ್ಲು ಹೋಬಳಿ ಕಂದಾಯ ಪರಿವೀಕ್ಷಕ ರಾಮಯ್ಯ ಇದ್ದರು.

ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಪ್ರದೀಪ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಧರಣಿ ಅಂತ್ಯ

ರಸ್ತೆ ಸಮಸ್ಯೆ ಬಹುತೇಕ ಇತ್ಯರ್ಥಗೊಂಡ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಜಿಲ್ಲಾಡಳಿತ ಕಚೇರಿ ಎದುರು ಕಾವೇರಿ ಸೇನೆ ಹಾಗೂ ಯವಕಪಾಡಿ ಗ್ರಾಮದ ಸತ್ಯಾನ್ವೇಷಣೆ ಸಮಿತಿ ನೇತೃತ್ವದಲ್ಲಿ ಅಡಿಯ ಜನಾಂಗದವರು ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಅಂತ್ಯ ಗೊಳಿಸಲಾಯಿತು.

(ಮೊದಲ ಪುಟದಿಂದ) ಈ ಸಂದರ್ಭ ಕಾವೇರಿ ಸೇನೆ ಸಂಚಾಲಕ ರವಿಚಂಗಪ್ಪ ಮಾತನಾಡಿ, ಶಾಸಕ ಕೆ.ಜಿ. ಬೋಪಯ್ಯ ಅವರು ಧರಣಿ ನಿರತರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ, ಬಳಿಕ ಸ್ಥಳಕ್ಕೆ ತೆರಳಿ ತಂತಿ ಬೇಲಿಯನ್ನು ಪರಿಶೀಲಿಸಿ ಬೇಲಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಧರಣಿಯನ್ನು ಅಂತ್ಯಗೊಳಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಗ್ರಾಮದ ಜನರಿಗೆ ಯಾವದೇ ತೊಂದರೆಯಾಗಬಾರದು. ಸಮಸ್ಯೆಯಾದಲ್ಲಿ ಜಿಲ್ಲಾಡಳಿತ ತಕ್ಷಣ ಪರಿಹರಿಸಲಿದೆ. ಆ ರಸ್ತೆಯನ್ನು ತಾಮರ ರೆಸಾರ್ಟ್‍ನವರು ಅಭಿವೃದ್ಧಿಪಡಿಸಿದ್ದಾರೆ. ರೆಸಾರ್ಟ್ ನವರನ್ನು ಕಚೇರಿಗೆ ಕರೆಯಿಸಿ ಮಾತುಕತೆ ಮಾಡಿ ತಂತಿಬೇಲಿಯನ್ನು ತೆರವುಗೊಳಿಸಲು ಸೂಚಿಸಲಾಗಿದೆ.

ಗ್ರಾಮದ ನಕ್ಷೆಯಲ್ಲಿರುವ ರಸ್ತೆ ಬೇರೆ ಇದೆ. ಒಟ್ಟಾರೆ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳ ವರದಿ ಪರಿಶೀಲಿಸಿ ಮುಂದೆ ದೀರ್ಘಾವಧಿಯ ಪರಿಹಾರ ಕಂಡುಕೊಳ್ಳಲಾಗುವದು ಎಂದು ಹೇಳಿದರು.