ಗೋಣಿಕೊಪ್ಪ, ಜೂ. 17: ವಿಶ್ವ ಆರೋಗ್ಯ ದಿನಾಚರಣೆಯ ಮಹತ್ವವನ್ನು ಮತ್ತು ಯೋಗ ಕಾರ್ಯಕ್ರಮದಲ್ಲಿ ಜನರನ್ನು ಪ್ರೇರೇಪಿಸಲು ಆರ್ಟ್ ಆಫ್ ಲಿವಿಂಗ್, ಆಯುಷ್ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳನ್ನು ಒಳಗೊಂಡು ತಾ. 18ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಉಮಾಮಹೇಶ್ವರಿ ದೇವಸ್ಥಾನದಿಂದ ಬೈಪಾಸ್ ಮುಖಾಂತರ ಸೈಕಲ್ ಜಾಥಾವನ್ನು ನಡೆಸಲಾಗುವದು ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪ್ರಮುಖ ಅಳಮೇಂಗಡ ರಾಜಪ್ಪ ತಿಳಿಸಿದ್ದಾರೆ.ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯರಾದ ಬುಟ್ಟಿಯಂಡ ಅಪ್ಪಾಜಿ ಹಾಗೂ ಆರ್ಟ್ ಆಫ್ ಲಿವಿಂಗ್‍ನ ಎಪೇಕ್ಸ್ ಘಟಕದ ಗಂಗಾ ಚೆಂಗಪ್ಪ ನೆರವೇರಿಸಲಿದ್ದಾರೆ.

ಜಿ.ಪಂ. ಸದಸ್ಯ ಸಿ.ಕೆ ಬೋಪಣ್ಣ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಯೋಗ ಅತೀ ಅವಶ್ಯವಾಗಿದ್ದು, ಇಂಥಹ ಕಾರ್ಯದಲ್ಲಿ ಎಲ್ಲರೂ ಜಾತಿ, ಧರ್ಮ, ರಾಜಕೀಯರಹಿತವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಸಭೆಯಲ್ಲಿ ಆರ್.ಎಸ್.ಎಸ್. ಪ್ರಮುಖರಾದ ಚಕ್ಕೆರ ಮನು ಕಾವೇರಪ್ಪ, ಕಿರಣ್ ಗ್ರಾ,ಪಂ ಸದಸ್ಯರಾದ ರಾಮಕೃಷ್ಣ, ಸಾವಿತ್ರಿ, ನಗರ ಬಿ.ಜೆ.ಪಿ. ಅಧ್ಯಕ್ಷ ಗಾಂಧಿ, ಇಂಡಿಯನ್ ಸೀನಿಯರ್ ಚೇಂಬರ್ ಅಧ್ಯಕ್ಷರಾದ ಕಿರಣ್, ಪೊನ್ನಪ್ಪ, ಜೀವನ್, ಮಧು ಮಾಚಯ್ಯ, ಟೀನಾ ಹಾಜರಿದ್ದರು.

ಮಡಿಕೇರಿ : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ತಾ. 18ರಂದು (ಇಂದು) ಬೆಳಿಗ್ಗೆ 7 ಗಂಟೆಗೆ ಜನರಲ್ ತಿಮ್ಮಯ್ಯ ವೃತ್ತದಿಂದ ಯೋಗ ಜಾಗೃತಿ ಜಾಥಾ ನಡೆಯಲಿದ್ದು, ಜಿಲ್ಲಾಧಿಕಾರಿ ಡಾ. ಆರ್.ವಿ. ಡಿಸೋಜ ಅವರು ಉದ್ಘಾಟಿಸಲಿದ್ದಾರೆ.