ಮಡಿಕೇರಿ, ಜೂ. 17: ಜಿಲ್ಲಾ ಗೃಹರಕ್ಷಕ ಕೊಡಗು ಜಿಲ್ಲೆ ಮಡಿಕೇರಿ ಕಚೇರಿಯಲ್ಲಿ 2017-18ನೇ ಸಾಲಿಗೆ ಗೃಹರಕ್ಷಕದಳದ ಪ್ರಸ್ತುತ ಖಾಲಿ ಇರುವ 150 ಸ್ಥಾನಗಳಿಗೆ ಸ್ವಯಂ ಸೇವಕ ಗೃಹರಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.ಕೊಡಗು ಜಿಲ್ಲೆಯ 20 ವರ್ಷದಿಂದ 45 ವರ್ಷದೊಳಗಿನ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ತಾ. 30 ರೊಳಗೆ ಅರ್ಜಿ ಸಲ್ಲಿಸಬಹುದು. 7ನೇ ತರಗತಿ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿ ಸಲ್ಲಿಸ ಬಯಸುವ ಸದಸ್ಯರು ಜಿಲ್ಲಾ ಗೃಹÀರಕ್ಷಕದಳ ಕಚೇರಿ ದೂ.ಸಂ: 08272-228427 ಮತ್ತು ಜಿಲ್ಲಾ ಸಮಾದೇಷ್ಟ ಮೆ. ಓ.ಎಸ್. ಚಿಂಗಪ್ಪ ಅವರನ್ನು ಸಂಪರ್ಕಿಸಬಹುದು.

ಮೊಬೈಲ್ ಸಂಖ್ಯೆ 9845331431 ಮತ್ತು ಕೊಡಗು ಜಿಲ್ಲೆಯಲ್ಲಿರುವ ಮಡಿಕೇರಿ, ಮೂರ್ನಾಡು, ಭಾಗಮಂಡಲ, ವೀರಾಜಪೇಟೆ, ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ ಗೃಹರಕ್ಷಕದಳ ಘಟಕ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ಗೃಹರಕ್ಷಕ ದಳ ಕಮಾಂಡೆಂಟ್ ತಿಳಿಸಿದ್ದಾರೆ.