ಗೋಣಿಕೊಪ್ಪಲು, ಜೂ. 16: ಶ್ರೀಮಂಗಲ ಸಮೀಪದ ಕುರ್ಚಿ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಸುಮಾರು 7 ಆನೆಗಳನ್ನು ಶ್ರೀಮಂಗಲ ವನ್ಯಜೀವಿ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬ್ರಹ್ಮಗಿರಿ ಅರಣ್ಯ ವಲಯಕ್ಕೆ ಸೇರಿಸಲಾಗಿದ ಗ್ರಾಮದಲ್ಲಿ ಬೆಳಿಗ್ಗೆ 6 ಗಂಟೆಯಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಕಾಫಿ ತೋಟಗಳ ಒಂದು ಕಡೆಯಿಂದ ಪಟಾಕಿ ಸಿಡಿಸುವ ಮೂಲಕ ಕಾಡಿನತ್ತ ಅಟ್ಟುವ ಪ್ರಯತ್ನ ನಡೆಸಲಾಯಿತು.

(ಮೊದಲ ಪುಟದಿಂದ) ಅಲ್ಲಿನ ಅಜ್ಜಮಾಡ ಶಂಕುರು ನಾಚಪ್ಪ, ಕುಶಾಲಪ್ಪ, ಪೂಣಚ್ಚ, ಮದ್ರೀರ ವಿಷ್ಣು ಬಾಳೆಯಡ ಅಶೋಕ್ ಇವರುಗಳ ತೋಟದಲ್ಲಿ ಸೇರಿಕೊಂಡಿದ್ದ ಆನೆಗಳನ್ನು ತಂಡವು ತೋಟಗಳಿಂದ ಹೊರ ಹೋಗುವಂತೆ ಮಾಡಿತು. ನಂತರ ಬ್ರಹ್ಮಗಿರಿ ಅರಣ್ಯಕ್ಕೆ ಸೇರಿಸಲಾಯಿತು.

ಸಂಜೆವರೆಗೆ ನಡೆದ ಕಾರ್ಯಾಚರಣೆಯಲ್ಲಿ ಆರ್‍ಎಫ್‍ಒ ವೀರೇಂದ್ರ, ಸಿಬ್ಬಂದಿ ಎ. ಎ. ಅಪ್ಪಣ್ಣ, ಮೋಹನ್ ಹಾಗೂ ಪ್ರೇಮನಾಥ್ ಪಾಲ್ಗೊಂಡಿದ್ದರು. ಗ್ರಾಮಸ್ಥರುಗಳು ತಂಡದೊಂದಿಗೆ ಸೇರಿಕೊಂಡು ಕಾರ್ಯಾಚರಣೆ ಯಶಸ್ವಿಗೊಳಿಸಿದರು.