ಗೋಣಿಕೊಪ್ಪಲು, ಜೂ. 16: ವೀರಾಜಪೇಟೆ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ಒಟ್ಟು 125 ಮುಖ್ಯ ಶಿಕ್ಷಕರಿಗೆ ವೀರಾಜಪೇಟೆ ವಲಯದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ವೀರಾಜಪೇಟೆಯಲ್ಲಿ ಪೂರ್ವಾಹ್ನ ಹಾಗೂ ಪೊನ್ನಂಪೇಟೆ ವಲಯದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಪೊನ್ನಂಪೇಟೆಯಲ್ಲಿ ಅಪರಾಹ್ನ ನಗದು ಪುಸ್ತಕ ನಿರ್ವಹಣೆ ಕುರಿತು ತರಬೇತಿ ನಡೆಯಿತು. ತರಬೇತಿಯ ಪ್ರಾಯೋಜಕತ್ವವನ್ನು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರಾದ ಪಿ.ಜಿ. ಜಾನಕಿ, ಟಿ.ಕೆ. ವಾಮನ, ಎಂ.ಕೆ. ನಳಿನಾಕ್ಷಿ ವಹಿಸಿದ್ದರು. ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಸರ್ವ ಶಿಕ್ಷಣ ಅಭಿಯಾನದ ಲೆಕ್ಕ ಪತ್ರ ತಪಾಸಣಾ ಅಧಿಕಾರಿ ಶಿವರಾಮ್ ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಸ್.ಪಿ. ಮಹದೇವ, ಬಿ.ಆರ್.ಪಿ.ಗಳಾದ ಬಿ.ಪಿ. ಉತ್ತಪ್ಪ, ಗೀತಾಂಜಲಿ, ಜೈಸಿ ಜೋಸೆಫ್, ಪ್ರಸನ್ನ ಕುಮಾರ್ ಹಾಗೂ ಶಿಕ್ಷಣ ಸಂಯೋಜಕರಾದ ಅಂಟರದಾನಿ, ರವೀಂದ್ರನಾಥ, ತಿಮ್ಮಪ್ಪ, ಅನ್ರಿತಾ ಪುರ್ಟಾಡೋ ಹಾಗೂ ತಾಲೂಕಿನ ಎಲ್ಲಾ ಸಿ.ಆರ್.ಪಿ.ಗಳು ಹಾಜರಿದ್ದರು.