ಸೋಮವಾರಪೇಟೆ, ಜೂ. 18: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ವಾರ್ಡ್ ಸಭೆ ತಾ. 20 ಹಾಗೂ 21 ರಂದು ನಡೆಯಲಿದೆ ಎಂದು ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.ತಾ. 20 ರಂದು ಪೂರ್ವಾಹ್ನ 10.30ಕ್ಕೆ ಐಗೂರು-1ರ ವಾರ್ಡ್ ಸಭೆ ಸದಸ್ಯೆ ಕುಮಾರಿ ಅವರ ಅಧ್ಯಕ್ಷತೆಯಲ್ಲಿ ಐಗೂರಿನ ಹರಿಹರ ಯುವಕ ಸಂಘದ ಆವರಣದಲ್ಲಿ, ಅಪರಾಹ್ನ 2.30ಕ್ಕೆ ಐಗೂರು-2ನೇ ವಾರ್ಡ್‍ನ ಸಭೆ ಕೆ.ಪಿ. ದಿನೇಶ್ ಅಧ್ಯಕ್ಷತೆಯಲ್ಲಿ ಹೊಸತೋಟದ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ.

ತಾ. 21 ರಂದು ಪೂರ್ವಾಹ್ನ 10.30ಕ್ಕೆ ಯಡವಾರೆ ವಾರ್ಡ್ ಸಭೆ ಕೆ.ಪಿ. ರಾಯ್ ಅಧ್ಯಕ್ಷತೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ, ಅಪರಾಹ್ನ 2.30ಕ್ಕೆ ಯಡವನಾಡು ವಾರ್ಡ್ ಸಭೆ ಡಿ.ಎಂ. ರಮೇಶ್ ಅಧ್ಯಕ್ಷತೆಯಲ್ಲಿ ಯಡವನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ.

ತಾ. 30 ರಂದು ಐಗೂರು ಗ್ರಾ.ಪಂ. ಗ್ರಾಮಸಭೆ ಅಧ್ಯಕ್ಷ ಡಿ.ಎಸ್. ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಐಗೂರಿನ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಪೂರ್ವಾಹ್ನ 10.30ಕ್ಕೆ ನಡೆಯಲಿದ್ದು, ಗ್ರಾ.ಪಂ. ಉಪಾಧ್ಯಕ್ಷೆ ಕೆ.ಪಿ. ಶೋಭಾ, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯೆ ಸಬಿತಾ ಚನ್ನಕೇಶವ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಅವರುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.