*ಗೋಣಿಕೊಪ್ಪ, ಜೂ. 18: ವಿಶ್ವ ಆರೋಗ್ಯ ದಿನಾಚರಣೆಯ ಮಹತ್ವವನ್ನು ಸಾರಲು, ಜನರಲ್ಲಿ ಜಾಗೃತಿ ಮೂಡಿಸಲು ಆರ್ಟ್ ಅಫ್ ಲೀವಿಂಗ್, ಅಯುಷ್ ಸಂಸ್ಥೆ. ಉಮಾಮಹೇಶ್ವರಿ ದೇವಾಸ್ಥಾನದಿಂದ ಬೈಪಾಸ್ ರಸ್ತೆ ಮೂಲಕ ಸೈಕಲ್ ಜಾಥಾ ನಡೆಸಿ ಯೋಗದ ಮಹತ್ವ ಸಾರಿದರು.ಜಾಥಾಕ್ಕೆ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಹಿರಿಯ ಬುಟ್ಟಿಯಂಡ ಅಪ್ಪಾಜಿ ಹಾಗೂ ಅರ್ಟ್ ಅಫ್ ಲೀವಿಂಗ್‍ನ ಎಪೇಕ್ಸ್ ಘಟಕದ ಗಂಗಾ ಚೆಂಗಪ್ಪ ಚಾಲನೆ ನೀಡಿದರು.

ಈ ಸಂದರ್ಭ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಮಾತನಾಡಿ, ಯೋಗದಿಂದ ಮನಸ್ಸು ಹಾಗೂ ದೇಹವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗಬಲ್ಲದು. ಹಲವು ರೋಗಗಳಿಂದ ಮುಕ್ತಿ ಹೊಂದಲು ಯೋಗ ಬಹುಮುಖ್ಯ ಎಂದರು.

ಆರ್ಟ್ ಅಫ್ ಲೀವಿಂಗ್ ಆರ್ಟ್ ಅಫ್ ಲೀವಿಂಗ್ ಸಂಸ್ಥೆಯ ಪ್ರಮುಖರಾದ ವಿ.ಟಿ. ವಾಸು, ಅಳಮೇಂಗಡ ರಾಜ, ಕಾಯೇರ ಕಿರಣ್, ಗ್ರಾ.ಪಂ. ಸದಸ್ಯರಾದ ಸಾವಿತ್ರಿ, ರತಿ ಅಚ್ಚಪ್ಪ, ಇಂಡಿಯನ್ ಸಿನಿಯರ್ ಚೇಂಬರ್ ಅಧ್ಯಕ್ಷ ಕಿರಣ್ ಪೊನ್ನಪ್ಪ, ಸದಸ್ಯರುಗಳಾದ ತಿರುನೆಲ್ಲಿಮಾಡ ಜೀವನ್, ಮಧು ಮಾಚಯ್ಯ, ಟೀನಾ ಹಾಜರಿದ್ದರು.