ಮಡಿಕೇರಿ, ಜೂ. 18: ತಾ. 21 ರಂದು ನಡೆಯುವ 3ನೇ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಯೋಗ ಜಾಥಾಗೆ ಚಾಲನೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಆರ್ಟ್ ಆಫ್ ಲಿವಿಂಗ್, ನೆಹರು ಯುವಕ ಕೇಂದ್ರ, ಜಿಲ್ಲಾ ಯುವ ಒಕ್ಕೂಟ ಸಹಕಾರದಲ್ಲಿ ನಡೆದ ಯೋಗ ಜಾಥದಲ್ಲಿ ಶಾಲಾ ಮಕ್ಕಳು ಇತರೆ ಯೋಗ ಸಂಬಂಧಿತ ಪದಾಧಿಕಾರಿ ಗಳು, ಯೋಗ ಬಂಧುಗಳು, ಅಶ್ವಿನಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು, ಇತರರು ಪಾಲ್ಗೊಂಡಿದ್ದರು.

ನಗರದ ಗೌಳಿಬೀದಿ ಮುಖಾಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂದಿರಾಗಾಂಧಿ ವೃತ್ತ, ಮಹದೇವಪೇಟೆ ಮಾರ್ಗ ಬಸ್ ನಿಲ್ದಾಣ ಮುಖಾಂತರ ಜಿಲ್ಲಾಡಳಿತ ಭವನದ ವರೆಗೆ ಜಾಥ ಜರುಗಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ .ಸತೀಶ್ ಕುಮಾರ್ ಮಾತನಾಡಿ ಯೋಗದಿಂದ ಶಾರೀರಿಕ ದೃಢತೆ, ಮಾನಸಿಕ ಸ್ವಾಸ್ಥ್ಯ ಹಾಗೂ ಸಾಮರ ಸ್ಯದ ಬದುಕಿಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯೋಗವು ಅನೇಕ ರೋಗಗಳಿಗೆ ಚಿಕಿತ್ಸೆಯಾಗಿಯೂ, ರೋಗ ಬರದಂತೆ ತಡೆಗಟ್ಟಲೂ ಅನುಕೂಲವಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ರಾಮಚಂದ್ರ ತಿಳಿಸಿದರು.

(ಮೊದಲ ಪುಟದಿಂದ)

ತಾ. 21 ರಂದು ಬೆಳಿಗ್ಗೆ 6.30 ರಿಂದ 9.30 ರವರೆಗೆ 3ನೇ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯು ನಗರದ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಜಿಲ್ಲಾ ಆಯುಷ್ ಕಚೇರಿಯ ಜಿಲ್ಲಾ ಆಯುಷ್ ಅಧಿಕಾರಿ ಬಿ.ಎಚ್. ರಾಮಚಂದ್ರ ಹೇಳಿದರು. ಆರ್ಟ್ ಆಫ್ ಲಿವಿಂಗ್‍ನ ರಾಜಪ್ಪ, ಮಹೇಶ ಕುಮಾರ್, ಕೆ.ಡ್ಲ್ಯೂ,ಬೋಪಯ್ಯ, ಕುಶಾಲಪ್ಪ, ಸ್ವಚ್ಚ ಹಸಿರು ಅಭಿಯಾನದ ಸತ್ಯ ಇತರರು ಇದ್ದರು.