ಕೂಡಿಗೆ, ಜೂ. 18: ಸಮೀಪದ ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಸಂಸತ್ ರಚನೆ ಮಾಡಲಾಯಿತು. ಎಂಟನೇ ತರಗತಿ ವಿದ್ಯಾರ್ಥಿ ಚಿಂತನ್ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದು, ರಮೀಜ್ ಗೃಹಮಂತ್ರಿ, ಜುಫೇನಾ ಶಿಕ್ಷಣ ಮಂತ್ರಿ, ಆರೋಗ್ಯ ಮಂತ್ರಿ ಸಫ್ವಾನ, ಕ್ರೀಡಾ ಮಂತ್ರಿ ಮನು, ತೋಟಗಾರಿಕಾ ಮಂತ್ರಿ ದೇವಿಪ್ರಸಾದ್, ಪರಿಸರ ಸಂರಕ್ಷಣೆ ಮಂತ್ರಿ ಮಂಜು, ವಾರ್ತಾ ಮಂತ್ರಿ ಭೂಮಿಕಾ, ಸಫಾಯ ಮಂತ್ರಿ ರಂಜು ಹಾಗೂ ಇತರ ಶಾಲಾ ನಾಯಕರುಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.

ನಂತರ ಆಯ್ಕೆಯಾದ ಶಾಲಾ ಸಂಸತ್‍ನಲ್ಲಿ ರಚನೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಚುನಾವಣಾ ಪ್ರಕ್ರಿಯೆಯ ನೋಡಲ್ ಅಧಿಕಾರಿಯಾಗಿ ಆರ್. ಚೇತನ್ ಕುಮಾರ್, ಸಹಾಯಕರಾಗಿ ಬಿ.ಎನ್. ಶೋಭಾ ಕಾಯನಿರ್ವಹಿಸಿದರು.

ಈ ಸಂದರ್ಭ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಇದ್ದರು.