ಮಡಿಕೇರಿ, ಜೂ. 19: ದೇಶದ ಎಲ್ಲಾ ನಾಗರಿಕರು ತಮ್ಮ ಸ್ಥಿರ ಆಸ್ತಿಗಳನ್ನು ಆಗಸ್ಟ್ 14ರ ಒಳಗೆ ಗಣಕೀಕರಣ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.ಕೃಷಿ ಹಾಗೂ ಕೃಷಿಯೇತರ ಭೂಮಿಗಳು, ಮನೆ, ಕಟ್ಟಡ ಹಾಗೂ ಎಲ್ಲಾ ಸ್ಥಿರ ಆಸ್ತಿಗಳನ್ನು ಗಣಕೀಕರಣದ ಮೂಲಕ ಆಧಾರ್ ಸಂಖ್ಯೆಗೆ ಜೋಡಣೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.1950ರಿಂದ ಹೊಂದಿರುವ ಆಸ್ತಿಗಳಿಗೆ ಈ ನಿಯಮ ಅನ್ವಯಿಸಲಿದ್ದು, ಈ ಮೂಲಕ ಬೇನಾಮಿ ಆಸ್ತಿಗಳನ್ನು ಪತ್ತೆ ಹಚ್ಚಲು ಸರ್ಕಾರ ನಿರ್ಧರಿಸಲಿದೆ.
ಈ ಬಗ್ಗೆ ಕೇಂದ್ರ ಸರಕಾರದ ಅಧೀನ ಕಾರ್ಯದರ್ಶಿ ಶಿಯೋನಾಥ್ ಸಿಂಗ್ ಅವರು ಎಲ್ಲಾ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ತಾ. 15ರಂದು ಸುತ್ತೋಲೆ ಕಳುಹಿಸಿದ್ದಾರೆ.