ಗೋಣಿಕೊಪ್ಪಲು, ಜೂ. 19: ಕೊಡಗು ಜಿಲ್ಲೆಗೆ ಕಳೆದ ಮೂರು ವರ್ಷ ಅವಧಿಯಲ್ಲಿ ಮಲೆನಾಡು ಅಭಿವೃದ್ಧಿ ಯೋಜನೆಯಲ್ಲಿ ಬಿಡುಗಡೆಯಾದ ಹಣವೆಷ್ಟು? ಎಷ್ಟು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ? ಮಾನ್ಯ ಸಚಿವರ ಕೋಟಾದಲ್ಲಿ ಎಷ್ಟು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ? ಎಂದು ಶಾಸಕ ಬೋಪಯ್ಯ ಅವರು ಕೇಳಿದ ಪ್ರಶ್ನೆಗೆ ಯೋಜನೆ ಮತ್ತು ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಅವರು ಸದನದಲ್ಲಿ ಉತ್ತರ ನೀಡಿದ್ದಾರೆ.ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ 2014-15 ನೇ ಸಾಲಿನಲ್ಲಿ ಮಡಿಕೇರಿ ತಾಲೂಕಿಗೆ ರೂ.18.45 ಲಕ್ಷ, 15-16 ನೇ ಸಾಲಿಗೆ ರೂ.104.63 ಲಕ್ಷ ಹಾಗೂ 2016-17 ನೇ ಸಾಲಿಗೆ ರೂ.480.30 ಲಕ್ಷ ಬಿಡುಗಡೆಯಾಗಿದ್ದರೆ, ಸೋಮವಾರಪೇಟೆ ತಾಲೂಕಿಗೆ ಕ್ರಮವಾಗಿ ರೂ.34.65 ಲಕ್ಷ, ರೂ.44.05 ಲಕ್ಷ ಹಾಗೂ ರೂ.60.63 ಲಕ್ಷ ಬಿಡುಗಡೆಯಾಗಿದೆ. ವೀರಾಜಪೇಟೆ ತಾಲೂಕಿಗೆ ಕ್ರಮವಾಗಿ ರೂ. 15.00 ಲಕ್ಷ, ರೂ.53.25 ಲಕ್ಷ ಹಾಗೂ ರೂ.47.86 ಲಕ್ಷ ಬಿಡುಗಡೆ ಯಾಗಿರುವದಾಗಿ ತಿಳಿಸಿದ್ದಾರೆ.
ಸುಮಾರು 61 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು ಅವುಗಳಲ್ಲಿ ಮಡಿಕೇರಿ ತಾಲೂಕು ಕುಂಜಿಲ ಗ್ರಾಮದಿಂದ ಇಗ್ಗುತ್ತಪ್ಪ ದೇವಾಲಯಕ್ಕೆ ಹೋಗುವ 3.50 ಕಿ.ಮೀ.ರಸ್ತೆ ಅಭಿವೃದ್ಧಿಗೆ ರೂ.285 ಲಕ್ಷ ಹಾಗೂ ನಾಪೆÇೀಕ್ಲು ಬೇತು ಗ್ರಾಮದ ರಸ್ತೆಯಿಂದ ಬಲಮುರಿ ಲಿಂಕ್ ರಸ್ತೆ ಕಾಮಗಾರಿಗೆ ರೂ.101.00 ಲಕ್ಷ ಅನುದಾನ ಬಿಡುಗಡೆಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಚಿವ ಸೀತಾರಾಮ್ ಅವರು ತಮ್ಮ ವಿವೇಚನಾ ಕೋಟಾದಲ್ಲಿ ಪ್ರಸ್ತುತ ವರ್ಷದಲ್ಲಿ ಯಾವದೇ ಕಾಮಗಾರಿ ಗಳನ್ನು ಶಿಫಾರಸ್ಸು ಮಾಡಿರುವದಿಲ್ಲ ಎಂದು ತಿಳಿಸಿದ್ದಾರೆ.
ಅನುದಾನದ ಕೊರತೆ
ಕನ್ನಡ ಮತ್ತು ಸಂಸ್ಕøತಿ, ಮಹಿಳಾ ಮತ್ತು ಮಕ್ಕಳ