ಶನಿವಾರಸಂತೆ, ಜೂ. 18: ಮನುಷ್ಯನ ಆರೋಗ್ಯದ ಮೇಲೆ ಪರಿಸರದ ಸ್ವಚ್ಛತೆ ಪರಿಣಾಮ ಬೀರುವದರಿಂದ ಪರಿಸರವನ್ನು ಉಳಿಸಿ ಬೆಳೆಸುವದು ಎಲ್ಲರ ಕರ್ತವ್ಯ ಎಂದು ಡಾ. ಗಿರೀಶ್ ಹೇಳಿದರು.ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಕರವೇ ತಾಲೂಕು ಘಟಕದ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಕೆ. ಕೊಟ್ರೇಶ್ ಮಾತನಾಡಿ, ಗಿಡ ನೆಡುವುದು ನಿತ್ಯೋತ್ಸವ ಕಾರ್ಯಕ್ರಮವಾಗಬೇಕು. ನೆಟ್ಟ ಗಿಡವನ್ನು ದಿನವೂ ಪೋಷಿಸಿ ಹೆಮ್ಮರವಾಗಿ ಬೆಳೆಸಿದರೇ ಮಾತ್ರ ಪರಿಸರ ದಿನಾಚರಣೆ ಸಾರ್ಥಕವೆನಿಸುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ನೆಪದಲ್ಲಾದರೂ ಎಲ್ಲೆಡೆ ಸಸಿ ನಡುವ ಕಾರ್ಯಕ್ರಮ ನಡೆಯುತ್ತಿರುವದು ಅರ್ಥಪೂರ್ಣವಾಗಿದೆ ಎಂದರು.

ವಲಯ ಉಪರಣ್ಯಾಧಿಕಾರಿ ಶ್ರೀನಿವಾಸ್ ‘ಶಕ್ತಿ’ ಪ್ರತಿನಿಧಿ ಎಸ್.ಜಿ. ನರೇಶ್ಚಂದ್ರ, ಆಟೋ ಚಾಲಿಕರ ಸಂಘದ ಅಧ್ಯಕ್ಷ ಈ.ಎಸ್. ದಿನೇಶ್, ಸಿ. ಪ್ರಕಾಶ್ಚಂದ್ರ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಕೆ. ಜಗದೀಶ್, ತಾಲೂಕು ಯುವ ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಹೋಬಳಿ ಅಧ್ಯಕ್ಷ ಆನಂದ, ಪದಾಧಿಕಾರಿಗಳಾದ ಅಹ್ಮದ್, ಹರೀಶ್. ಪ್ರವೀಣ್, ಮಹೇಶ್, ಅರುಣ್ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.