ಮಡಿಕೇರಿ, ಜೂ. 21: ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ವಿವಿಧ ಯೋಜನೆÀಗಳಿಗೆ ಅಗತ್ಯ ಅನುದಾನ ಬಿಡುಗಡೆಯಾಗದೆ ಇರುವದರಿಂದ ಕೊಡಗು ಜಿಲ್ಲೆಯ ಕ್ರೈಸ್ತ ಸಮುದಾಯ ಈ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲವೆಂದು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜೋಕಿಂ ರಾಡ್ರಿಗಸ್, ಶಾದಿ ಭಾಗ್ಯ ಹಾಗೂ ಬಿದಾಯಿ ಯೋಜನೆಯಡಿ ಇರುವ ಸೌಲಭ್ಯಗಳನ್ನು ಕ್ರೈಸ್ತ ಸಮುದಾಯಕ್ಕೆ ಒದಗಿಸದೆ ಕಳೆದ ಎರಡು ವರ್ಷಗಳಿಂದ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಶಾದಿ ಭಾಗ್ಯ ಯೋಜನೆಯಡಿ ವಿವಾಹಪೂರ್ವ ಆರ್ಥಿಕ ನೆರವನ್ನು ನೀಡಬೇಕಾಗುತ್ತದೆ. ಆದರೆ, ವಿವಾಹವಾಗಿ ಹತ್ತು ತಿಂಗಳು ಕಳೆದರೂ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಹಣ ದೊರೆತಿಲ್ಲ. ‘ಜಿಲ್ಲೆಯಲ್ಲಿ ಸುಮಾರು 24 ಮಂದಿ ಶಾದಿ ಭಾಗ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದು, ಇಬ್ಬರು ಫಲಾನುಭವಿಗಳ ವಿವಾಹ ನಡೆದು ಆ ದಂಪತಿಗಳಿಗೆ ಮಕ್ಕಳಾದರೂ ಆರ್ಥಿಕ ನೆರವಿನ ಭಾಗ್ಯ ಬಂದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚೆಗೆ ಕೊಡಗಿಗೆ ಭೇಟಿ ನೀಡಿದ್ದ ಶಾಸಕ ಐವಾನ್ ಡಿಸೋಜ ನೇತೃತ್ವದ ಅಲ್ಪಸಂಖ್ಯಾತ ಕಲ್ಯಾಣ ಸಮಿತಿಯ ಸಭೆಯಲ್ಲಿ ಕ್ರೈಸ್ತ ಸಮುದಾಯಕ್ಕೆ ಸೌಲಭ್ಯವನ್ನು ನೀಡಲು ಅನುದಾನದ ಕೊರತೆ ಇಲ್ಲವೆಂದು ತಿಳಿಸಲಾಗಿತ್ತು. ಆದರೆ, ಫಲಾನುಭವಿಗಳಿಗೆ ಆರ್ಥಿಕ ಸಹಕಾರ ನೀಡಲು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಅನುದಾನ ಬಿಡುಗಡೆ ಯಾಗಿಲ್ಲವೆಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಸರ್ಕಾರ ಮತ್ತು ಅಧಿಕಾರಿಗಳ ನಡುವೆ ಹೊಂದಾಣಿಕೆಯ ಕೊರತೆ ಇದ್ದು, ಅಧಿಕಾರಿಗಳು ತಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಜೋಕಿಂ ರಾಡ್ರಿಗಸ್ ಆರೋಪಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಇ.ಎಸ್. ರೆಬೆಲ್ಲೋ, ವೀರಾಜಪೇಟೆ ತಾಲೂಕು ಅಧ್ಯಕ್ಷ ಸುಭಾಷ್ ಮ್ಯಾಥ್ಯೂ ಹಾಗೂ ಮಡಿಕೆÉೀರಿ ನಗರ ಅಧ್ಯಕ್ಷರಾದ ಸ್ಟ್ಯಾನ್ಲಿ ಉಪಸ್ಥಿತರಿದ್ದರು.