ಮಡಿಕೇರಿ, ಜೂ. 21: ಪೊನ್ನಂಪೇಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಾಲಾ ಮಂತ್ರಿಮಂಡಲದ ರಚನೆ ಹಾಗೂ ಸೈಕಲ್ ವಿತರಣೆ ಕಾರ್ಯಕ್ರಮ ನಡೆಯಿತು.

ಶಾಲಾಭಿವೃದ್ಧಿ ಸಮಿತಿ ಸದಸ್ಯ ಮಹದೇವ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಮೂಕಳೇರ ಆಶಾ ಪೂಣಚ್ಚ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾಲೇಜಿನ ಪ್ರಬಾರ ಪ್ರಾಂಶುಪಾಲೆ ಡಿ. ಚಂದನ್ ಅವರು ಶಾಲೆಗಳಿಗೆ ಪೋಷಕರ ಸಹಕಾರ ಅತ್ಯಗತ್ಯ, ವಿದ್ಯಾರ್ಥಿಗಳು ಮುಂದುವರಿಯಲು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಶಿಕ್ಷಕಿ ಕೀರ್ತಿ ಹೆಗ್ಗಡೆ ವಿದ್ಯಾರ್ಥಿ ನಾಯಕರುಗಳು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನ್ಯಾಯನಿಷ್ಠೆ, ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಮೈಗೂಡಿಸಿಕೊಳ್ಳಬೇಕೆಂದರು. ಇದೇ ಸಂದರ್ಭ ಶಾಲೆಯ 110 ಮಂದಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲಾಯಿತು.

ಮಂತ್ರಿಮಂಡಲ

ಶಾಲಾ ಮಂತ್ರಿಮಂಡಲಕ್ಕೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ ವಿದ್ಯಾರ್ಥಿ ನಾಯಕರುಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಶಾಲಾ ನಾಯಕನಾಗಿ ಎಂ. ವಿಕೇಶ್, ನಾಯಕಿಯಾಗಿ ಹೆಚ್.ಪಿ. ಸಿಂಚನ, ಕಾರ್ಯದರ್ಶಿಯಾಗಿ ಪಿ.ಪಿ. ಜೀವನ್, ಟಿ.ಸಿ. ಸುಚಿತ, ಆಹಾರ ಮಂತ್ರಿಯಾಗಿ ಪಿ.ಬಿ. ಸಿದ್ದು, ಅನುಪಮ, ಸ್ವಚ್ಛತಾ ಮಂತ್ರಿಯಾಗಿ ವೈ.ಬಿ. ಅಯ್ಯಪ್ಪ, ಹೆಚ್.ಎಂ. ಗೀತಾಂಜಲಿ, ಸಾಂಸ್ಕøತಿಕ ಮಂತ್ರಿಯಾಗಿ ಬಿ.ಅರ್ಜುನ್, ಕೆ.ಎಸ್. ಸುರಕ್ಷಾ, ಶಿಸ್ತು ಮಂತ್ರಿಯಾಗಿ ಎಸ್.ಎನ್. ಯಶ್ವಿನ್, ಸುಚಿನ್, ಕ್ರೀಡಾಮಂತ್ರಿಯಾಗಿ ಎಸ್. ಆದಿರಾ, ಡಿ.ಜಿ. ಸುಜಯ್, ನೀರಾವರಿ ಮಂತ್ರಿಯಾಗಿ ಎನ್. ಪೂರ್ಣಿಮಾ, ಎಸ್. ಚಂದನ್, ಆರೋಗ್ಯ ಮಂತ್ರಿಯಾಗಿ ಎ. ರಕ್ಷಿತ್ ಕಾರ್ಯಪ್ಪ, ಹೆಚ್.ಎಂ. ರಕ್ಷಿತಾ, ವಾರ್ತಾ ಮತ್ತು ಶಿಕ್ಷಣ ಮಂತ್ರಿಯಾಗಿ ಜಿ. ಗಗನ್‍ಕುಮಾರ್, ಟಿ.ಎಸ್. ಪೂಜಾ ಅವರುಗಳು ಪ್ರಮಾಣ ವಚನ ಸ್ವೀಕಾರ ಮಾಡಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೆ.ಎಲ್. ರೋಹಿಣಿ, ವಿದ್ಯಾರ್ಥಿ ನಾಯಕರುಗಳ ಖಾತೆ ಬಗ್ಗೆ ಮಾಹಿತಿ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ಡ್ಯಾನಿ ಈರಪ್ಪ ಪ್ರಮಾಣ ವಚನ ಬೋಧಿಸಿದರು. ಶಿಕ್ಷಕಿ ಕೆ.ಪಿ. ವಸಂತಿ ವಂದಿಸಿದರು.