ಗೋಣಿಕೊಪ್ಪಲು, ಜೂ. 21: ಇತ್ತೀಚೆಗೆ ತಿತಿಮತಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಭದ್ರಗೊಳ ಅಬ್ಬೂರು ನಿವಾಸಿ, ಗೋಣಿಕೊಪ್ಪಲು ಕಾವೇರಿ ಕಾಲೇಜು ವಿದ್ಯಾರ್ಥಿನಿ ಸಫೀನಾ (20) ಕಾಡಾನೆ ಹಠಾತ್ ಧಾಳಿಯಿಂದ ಮೃತಪಟ್ಟಿದ್ದು, ಈಕೆಯ ಪೆÇೀಷಕ ರಾದ ಮುಸ್ತಾಫಾ ಆಲಿಯ ಕುಟುಂಬಕ್ಕೆ ಉಳಿಕೆ ಪರಿಹಾರ ಮೊತ್ತದ ರೂ. 3 ಲಕ್ಷ ಚೆಕ್ ಅನ್ನು ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೆÇನ್ನಪ್ಪ ಅವರು ಅಬ್ಬೂರು ನಿವಾಸಕ್ಕೆ ತೆರಳಿ ಹಸ್ತಾಂತರಿಸಿದರು.

ಕಾವೇರಿ ಕಾಲೇಜಿಗೆ ತನ್ನ ಸಹೋದರನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಅಬ್ಬೂರು ಕಾಫಿ ತೋಟದಿಂದ ನುಸುಳಿದ ಕಾಡಾನೆಯು ಸಫೀನಾಳನ್ನು ತನ್ನ ದಂತದಿಂದ ತಿವಿದು ಹತ್ಯೆ ಮಾಡಿತ್ತಲ್ಲದೆ, ತನ್ನ ದಂತವೊಂದನ್ನು ಈ ಹಂತದಲ್ಲಿ ಕಳೆದುಕೊಂಡಿತ್ತು.

ತಿತಿಮತಿ ಅರಣ್ಯ ಇಲಾಖೆ ವತಿಯಿಂದ ತುರ್ತು ರೂ. 2 ಲಕ್ಷ ಪರಿಹಾರ ನೀಡಲಾಗಿದ್ದು, ಒಟ್ಟು ರೂ. 5 ಲಕ್ಷ ಪರಿಹಾರದಲ್ಲಿ ಉಳಿಕೆ ರೂ. 3 ಲಕ್ಷ ಮೊತ್ತವನ್ನು ಇದೀಗ ಹಸ್ತಾಂತರಿಸಲಾಗಿದೆ.

ಚೆಕ್ ಹಸ್ತಾಂತರ ಸಂದರ್ಭ ಜಿ.ಪಂ.ಸದಸ್ಯೆ ಪಿ.ಆರ್. ಪಂಕಜ, ತಿತಿಮತಿ ವಲಯಾರಣ್ಯಾಧಿಕಾರಿ ಅಶೋಕ್ ಹುನಗುಂದ್, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ತಿತಿಮತಿ ಗ್ರಾ.ಪಂ. ಸದಸ್ಯ ಶಿವಕುಮಾರ್, ವನ್ಯಜೀವಿ ಸಂರಕ್ಷಣಾ ಸಂಘದ ಅಧ್ಯಕ್ಷ ಕರ್ನಲ್ ಮುತ್ತಣ್ಣ, ಪರಿಸರವಾದಿ ಶರಿ ಸುಬ್ಬಯ್ಯ, ಮಾಂಗೇರ ಪೆÇನ್ನಪ್ಪ ಮುಂತಾದವರು ಉಪಸ್ಥಿತರಿದ್ದರು.