ಗೋಣಿಕೊಪ್ಪಲು, ಜೂ. 23: ಮೂರು ದಿನಗಳ ಕಾಲ ನಡೆದ ರುದ್ರಬೀಡು ಶ್ರೀ ಬಾಡತಯ್ಯಪ್ಪ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕಲಶ ಪ್ರತಿಷ್ಠಾಪನಾ ಪೂಜಾ ಕಾರ್ಯ ತೆರೆ ಕಂಡಿತು. ಕೊನೆಯ ದಿನ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ, ಶ್ರೀ ಈಶ್ವರ, ಶ್ರೀ ಭಗವತಿ ಹಾಗೂ ನವಗ್ರಹ ದೇವರುಗಳಿಗೆ ಮಹಾ ಗಣಪತಿ ಪ್ರೂಜೆ, ಪುಣ್ಯಾಹ ವಾಚನ, ಶಾಂತಿ ಹೋಮ, ಮೂಲಮಂತ್ರ ಹೋಮ, ನವಗ್ರಹ ಹೋಮ, ಪ್ರಾಯಶ್ಚಿತ ಹೋಮ, ಮಹಾ ಪೂರ್ಣಾಹುತಿ, ಬ್ರಹ್ಮಕಲಶಾಭಿಷೇಕ, ದೇವರ ಅಲಂಕಾರ, ಮಹಾಪೂಜೆ, ಮಹಾಮಂಗಳಾರತಿ ಮೂಲಕ ಪ್ರತಿಷ್ಠಾಪನಾ ವಿವಿಧ ಪೂಜಾ ವಿಧಿ ವಿಧಾನಗಳು ನಡೆದವು. ಮಾಯಮುಡಿ, ರುದ್ರಬೀಡು ಹಾಗೂ ಧನುಗಾಲ ಗ್ರಾಮದ ಭಕ್ತಾದಿಗಳು ಪಾಲ್ಗೊಂಡರು. ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚೆಪ್ಪುಡೀರ ನಾಣಯ್ಯ, ಕಾರ್ಯದರ್ಶಿ ಮಲ್ಲೇಂಗಡ ಪೂಣಚ್ಚ, ನಿರ್ದೇಶಕರುಗಳಾದ ಆಲೆಮಾಡ ಗಣಪತಿ, ನಂಬುಡುಮಾಡ ಸುರೇಶ್, ಚೆಪ್ಪುಡೀರ ಪ್ರದೀಪ್, ಬೋಪಣ್ಣ, ಮಧು ಅಪ್ಪಣ್ಣ, ಚೆಪ್ಪುಡೀರ ತಿಮ್ಮಯ್ಯ, ದರ್ಶನ್, ಬಾನಂಡ ಪ್ರಕಾಶ್, ಮಲ್ಲೇಂಗಡ ಮಮತ ಹಾಗೂ ಅಲ್ಲಾರಂಡ ಸನ್ನಿ ಪಾಲ್ಗೊಂಡರು.