ನಾಪೋಕ್ಲು, ಜೂ. 23: ರಾಜ್ಯ ಸರ್ಕಾರದಿಂದ ಕರ್ನಾಟಕದ ರೈತರು ಸಹಕಾರ ಸಂಘದಿಂದ ಪಡೆದ ರೂ. 50,000 ವರೆಗಿನ ಸಾಲ ಮನ್ನಾ ಮಾಡಿ ಘೋಷಣೆ ಹೊರಡಿಸಿದ್ದು ಸ್ವಾಗತಾರ್ಹ ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ತಿಳಿಸಿದ್ದಾರೆ.ಅಲ್ಪಪ್ರಮಾಣದ ಸಾಲ ಮನ್ನಾದಿಂದ ರೈತರ ಸಮಸ್ಯೆಗಳಿಗೆ ಪೂರ್ಣ ಪರಿಹಾರ ಸಿಗುವದಿಲ್ಲ. ಇದು ರೈತರಿಗೆ ಒಂದು ಬೋನಸ್ ನೀಡಿದಂತಾಗಿದ್ದು, ನಿಜವಾಗಿಯೂ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕಾದರೆ ಮುಖ್ಯವಾಗಿ ರೈತರು ಬೆಳೆದ ಬೆಳೆಗೆ ವೈಜ್ಞಾನಿಕವಾಗಿ ಬೆಲೆ, ರೈತರ ಬೆಳೆಗೆ ಗುಣಮಟ್ಟ ಹೆಚ್ಚಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಕೋರುವದಾಗಿ ಡಾ. ಕಾವೇರಪ್ಪ ಹೇಳಿದ್ದಾರೆ. - ದುಗ್ಗಳ