ಮಡಿಕೇರಿ, ಜೂ. 24: ಜಿಲ್ಲೆಯಲ್ಲಿ ಕೊಡವ ಹಾಗೂ ಅರೆಭಾಷೆ ಅಕಾಡೆಮಿಗಳಿಂದ ಕಳೆದ ಮೂರು ವರ್ಷಗಳಲ್ಲಿ ಉತ್ತಮ ಚಟುವಟಿಕೆಯೊಂದಿಗೆ ನಾಡಿನ ಗಡಿಯಾಚೆಗೂ ಇಲ್ಲಿನ ಆಚಾರ-ವಿಚಾರ, ಪದ್ಧತಿ - ಪರಂಪರೆಯ ಬೆಳವಣಿಗೆಗೆ ಪೂರಕ ಕಾರ್ಯಕ್ರಮ ರೂಪಿಸಿದ್ದು, ಪ್ರಸಕ್ತ ಹಣದ ಕೊರತೆಯ ಹಿನ್ನೆಲೆ ಉಭಯ ಅಕಾಡೆಮಿಗಳಿಗೆ ಸರಕಾರದಿಂದ ರೂ. 1 ಕೋಟಿ ಅನುದಾನ ಕಲ್ಪಿಸಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಬೇಡಿಕೆ ಮಂಡಿಸಿದ್ದಾರೆ.

ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರ ಉಪಸ್ಥಿತಿಯಲ್ಲಿ ಜರುಗಿದ ಕಾರ್ಯಕ್ರಮದ ವೇಳೆ ಶಾಸಕರ ಬೇಡಿಕೆಗೆ ಇತರ ಜನಪ್ರತಿನಿಧಿಗಳು ದನಿಗೂಡಿಸಿ ಅಕಾಡೆಮಿಗಳು ಪರಿಣಾಮಕಾರಿಯಾಗಿ ಕಾರ್ಯೋನ್ಮುಖವಾಗಲು ಹೆಚ್ಚಿನ ಅನುದಾನ ಅಗತ್ಯವೆಂದು ಅಭಿಪ್ರಾಯಪಟ್ಟರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಸೀತಾರಾಂ ಅವರು ಜಿಲ್ಲೆಯ ಹಿರಿಮೆಯ ಸಂಸ್ಕøತಿಯನ್ನು ಪ್ರತಿಬಿಂಬಿಸುವಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಉತ್ತಮ ಚಟುವಟಿಕೆ ಹಮ್ಮಿಕೊಂಡಿರುವದು ಶ್ಲಾಘನೀಯ ಎಂದರಲ್ಲದೆ, ಸರಕಾರದಿಂದ ಎಲ್ಲ ರೀತಿಯ ಸಹಕಾರ (ಮೊದಲ ಪುಟದಿಂದ) ಪ್ರಶಸ್ತಿಗಳು ಹುಡುಕಿಕೊಂಡು ಬರಬೇಕೆಂದು ಈ ಸಂದರ್ಭ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಆಶಿಸಿದರು. ಯಾರದೋ ಪ್ರಭಾವ ಅಥವಾ ಒತ್ತಡದಿಂದ ರಾಜ್ಯೋತ್ಸವದಂತಹ ಪುರಸ್ಕಾರಗಳನ್ನು ನೀಡಲಾಗುತ್ತಿದ್ದು, ಇಲ್ಲಿ ಸಾಧಕರನ್ನು ಅಕಾಡೆಮಿ ಗುರುತಿಸಿ ಗೌರವಿಸಿರುವದು ಸ್ವಾಗತಾರ್ಹವೆಂದು ಮೆಚ್ಚುಗೆಯ ನುಡಿಯಾಡಿದರು.

ಕರ್ನಾಟಕ ಅರಣ್ಯ ನಿಗಮ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಕ.ಸಾ.ಪ. ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಆರ್.ಎಸ್.ಎಸ್. ಪ್ರಮುಖ ಮಚ್ಚಾರಂಡ ಮಣಿ ಕಾರ್ಯಪ್ಪ ಮೊದಲಾದವರು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಚಟುವಟಿಕೆಗಳನ್ನು ಶ್ಲಾಘಿಸಿ ಮಾತನಾಡಿದರು.

ಈ ಸಂದರ್ಭ ನಾಡಿನ ಹಿರಿಯರನ್ನು ಅವರ ಕಲಾಸೇವೆಗಾಗಿ ಗುರುತಿಸಿ ವಾರ್ಷಿಕ ಪ್ರಶಸ್ತಿ ನೀಡಲಾಯಿತು. ಅಲ್ಲದೆ ವಿವಿಧ ಸಾಹಿತ್ಯಗಳ ಬಿಡುಗಡೆಯೊಂದಿಗೆ ಕೊಡವ ವಾಲಗದ ಮೂಲವಿರುವ ಸಿ.ಡಿ.ಯನ್ನು ನಾಡಿಗೆ ಸಮರ್ಪಿಸುವದರೊಂದಿಗೆ ವಾರ್ಷಿಕ ಪುಸ್ತಕ ಪ್ರಶಸ್ತಿ, ಇನ್ನಿತರ ಸಾಧಕರನ್ನು ಗೌರವಿಸಲಾಯಿತು. ಇದೇ ಸಂದರ್ಭ ಗ್ರಾಮೀಣ ಕಲಾತಂಡಗಳಿಗೆ ಕೊಡಗಿನ ದುಡಿ ಹಾಗೂ ಚಂಡೆ ಇತ್ಯಾದಿಗಳನ್ನು ವಿತರಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರು ಪ್ರಾಸ್ತಾವಿಕ ನುಡಿಯೊಂದಿಗೆ ತಮ್ಮ ಅಧಿಕಾರ ಅವಧಿಯಲ್ಲಿ ಸಹಕರಿಸಿದ ಸರ್ವರಿಗೆ ಕೃತಜ್ಞತೆ ಸಲ್ಲಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಡಾ. ವಿನ್ಸೆಂಟ್ ಡಿಸೋಜ, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಮಾದೇಟಿರ ಬೆಳ್ಯಪ್ಪ ನಿರೂಪಿಸಿದರೆ, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಬಳಗ ನಾಡಗೀತೆ ಹಾಡಿದರು. ಚೋವಂಡ ಬೋಪಯ್ಯ ವಂದಿಸಿದರು.