ವೀರಾಜಪೇಟೆ, ಜೂ. 23: ವೀರಾಜಪೇಟೆ ಬಳಿಯ ಕುಟ್ಟಂದಿ ಗ್ರಾಮದ ಕೊಲ್ಲೀರ ಬೋಪಣ್ಣ ಅವರ ಕಾಫಿ ತೋಟದ ಪಂಪ್ ಹೌಸ್‍ನಲ್ಲಿ ವಿದ್ಯುತ್ ಮೀಟರ್ ಬೋರ್ಡ್‍ನ ಬಳಿಯಲ್ಲಿದ್ದ ಕಾಳಿಂಗ ಸರ್ಪವನ್ನು ನಾಂಗಾಲದ ಸ್ನೇಕ್ ಗಗನ್ ಸೆರೆ ಹಿಡಿದು ಮಾಕುಟ್ಟದ ಅರಣ್ಯಕ್ಕೆ ಬಿಟ್ಟಿದ್ದಾರೆ.

ಕಾಳಿಂಗ ಸರ್ಪ ಐದು ದಿನಗಳಿಂದ ತೋಟದ ಸುತ್ತ ಸಂಚರಿಸುತ್ತಿದ್ದು, ಕಾರ್ಮಿಕರಿಗೆ ಜೀವಭಯ ಉಂಟು ಮಾಡುತಿತ್ತು. ತೋಟದ ಪಂಪ್ ಹೌಸ್‍ನಲ್ಲಿ ಇಲಿಯನ್ನು ಆಹಾರಕ್ಕಾಗಿ ಬೇಟೆಯಾಡುತ್ತಿದ್ದಾಗ ಸ್ನೇಕ್ ಗಗನ್ ಸೆರೆ ಹಿಡಿದಿದ್ದಾರೆ.

ಕಳೆದ 20 ದಿನಗಳ ಹಿಂದೆಯೂ ಬಿಟ್ಟಂಗಾಲ ಬಳಿಯಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಮಾಕುಟ್ಟ ಅರಣ್ಯಕ್ಕೆ ಬಿಡಲಾಗಿತ್ತು.