ಮಡಿಕೇರಿ, ಜೂ. 23: ಮಡಿಕೇರಿಯಲ್ಲಿರುವ ಕೊಡಗು ಪ್ರೆಸ್‍ಕ್ಲಬ್‍ನ 2017-2020ರ ಸಾಲಿನ ನೂತನ ಆಡಳಿತ ಮಂಡಳಿ ರಚನೆಗೆ ಸಂಬಂಧಿಸಿದಂತೆ ಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಜುಲೈ 2ರಂದು ಚುನಾವಣೆ ಅಧಿಸೂಚನೆಯೊಂದಿಗೆ ತಾ.2ರಿಂದ ತಾ.4ರವರೆಗೆ ಬೆಳಿಗ್ಗೆ 10ರಿಂದ ಅಪರಾಹ್ನ 12 ಗಂಟೆಯೊಳಗೆ ನಾಮಪತ್ರ ಸ್ವೀಕರಿಸಲಾಗುವದು. ತಾ. 4ರಂದೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಅಂದು ಅಪರಾಹ್ನ 3 ಗಂಟೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ. ತಾ. 5ರಂದು ಸಂಜೆ 4 ಗಂಟೆಯ ತನಕ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ತಾ. 5ರಂದು 4 ಗಂಟೆಗೆ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ. ತಾ. 9ರಂದು ಅಪರಾಹ್ನ 12.30ರಿಂದ 2 ಗಂಟೆಯ ತನಕ ಮತದಾನ ನಡೆಯಲಿದ್ದು, ಅಂದೇ ಅಪರಾಹ್ನ 3 ಗಂಟೆಗೆ ಮತ ಎಣಿಕೆ ನಡೆಯಲಿದ್ದು, ಬಳಿಕ ಫಲಿತಾಂಶ ಪ್ರಕಟಗೊಳ್ಳಲಿದೆ.

ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರುವವರ ಹಾಗೂ ಮತದಾರರ ಪಟ್ಟಿಯನ್ನು ಪ್ರೆಸ್‍ಕ್ಲಬ್‍ನ ಸೂಚನಾಫಲಕದಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಚುನಾವಣಾಧಿಕಾರಿಯಾಗಿ ನಿವೃತ್ತ ಉಪತಹಶೀಲ್ದಾರ್ ಕೆ.ಬಿ. ರಾಘವಯ್ಯ ಕಾರ್ಯನಿರ್ವಹಿಸಲಿದ್ದಾರೆ.