ಮಡಿಕೇರಿ, ಜೂ. 23: ಮಡಿಕೇರಿಯಲ್ಲಿರುವ ಕೊಡಗು ಪ್ರೆಸ್‍ಕ್ಲಬ್‍ನ 2017-2020 ರ ಸಾಲಿನ ನೂತನ ಆಡಳಿತ ಮಂಡಳಿ ರಚನೆಗೆ ಸಂಬಂಧಿಸಿದಂತೆ ಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಜುಲೈ 2 ರಂದು ಚುನಾವಣೆ ಅಧಿಸೂಚನೆಯೊಂದಿಗೆ ತಾ. 2 ರಿಂದ ತಾ. 4 ರವರೆಗೆ ಬೆಳಿಗ್ಗೆ 10 ರಿಂದ ಅಪರಾಹ್ನ 12 ಗಂಟೆಯೊಳಗೆ ನಾಮಪತ್ರ ಸ್ವೀಕರಿಸಲಾಗುವದು. ತಾ. 4 ರಂದೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಅಂದು ಅಪರಾಹ್ನ 3 ಗಂಟೆಗೆ ನಾಮಪತ್ರ ಪರಿಶೀಲನೆ ನಡೆಯಲಿದೆ. ತಾ. 5 ರಂದು ಸಂಜೆ 4 ಗಂಟೆಯತನಕ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ತಾ. 5 ರಂದು ಸಂಜೆ 4 ಗಂಟೆಗೆ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ. ತಾ. 9 ರಂದು ಅಪರಾಹ್ನ 12.30 ರಿಂದ 2 ಗಂಟೆಯತನಕ ಮತದಾನ ನಡೆಯಲಿದ್ದು, ಅಂದೇ ಅಪರಾಹ್ನ 3 ಗಂಟೆಗೆ ಮತ ಎಣಿಕೆ ನಡೆಯಲಿದ್ದು, ಬಳಿಕ ಫಲಿತಾಂಶ ಪ್ರಕಟಗೊಳ್ಳಲಿದೆ.

ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರುವವರ ಹಾಗೂ ಮತದಾರರ ಪಟ್ಟಿಯನ್ನು ಪ್ರೆಸ್‍ಕ್ಲಬ್‍ನ ಸೂಚನಾ ಫಲಕದಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಚುನಾವಣಾಧಿಕಾರಿ ಯಾಗಿ ನಿವೃತ್ತ ಉಪ ತಹಶೀಲ್ದಾರ್ ಕೆ.ಬಿ. ರಾಘವಯ್ಯ ಕಾರ್ಯ ನಿರ್ವಹಿಸಲಿದ್ದಾರೆ.