ಸುಂಟಿಕೊಪ್ಪ, ಜೂ. 23: ಕ್ರಿಕೆಟ್ ಪಂದ್ಯದಲ್ಲಿ ಜಯಗಳಿಸಿದ ಪಾಕಿಸ್ತಾನ ತಂಡದ ಪರ ಘೋಷಣೆಗಳನ್ನು ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ಪ್ರಕರಣವನ್ನು ಸೋಮವಾರಪೇಟೆ ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷ ಪಿ.ಕೆ.ಶೇಷಪ್ಪ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ಕೆ.ರಂಜಿತ್ ಖಂಡಿಸಿದ್ದಾರೆ.

ರಾಷ್ಟ್ರ ವಿರೋಧಿ ಶಕ್ತಿಗಳು ಇನ್ನು ಮುಂದೆ ಕೊಡಗಿನಲ್ಲಿ ಇಂತಹ ಕೃತ್ಯ ಎಸಗಬಾರದು. ಅಲ್ಲದೇ ಈ ಕೃತ್ಯ ಎಸಗಿದ ಆರೋಪಿ ರಿಯಾಜ್‍ನ ತಂದೆ ಏಳನೇ ಹೊಸಕೋಟೆಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಸ್ತಾಪ (ಕುಂಜ್ಞಿಕುಟ್ಟಿ) ಅವರು ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಗ್ರಾ.ಪಂ. ಉಪಾಧ್ಯಕ್ಷ ಸ್ಥಾನಕ್ಕೂ ಮತ್ತು ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡಿ ಸಾರ್ವಜನಿಕವಾಗಿ ಕ್ಷಮೆಯಾಚಿ¸ Àಬೇಕು. ಅಲ್ಲದೆ ಈ ಕೃತ್ಯವನ್ನು ಮಾಡಿದ ದೇಶ ದ್ರೋಹಿಗಳನ್ನು ಬಂಧಿಸಿ ಪೊಲೀಸ್ ಠಾಣೆಗೆ ತಂದಾಗ ಅವರ ಪರ ನಿಂತು ಏನು ಅರಿಯದೇ ಮಾಡಿದ ತಪ್ಪನ್ನು ಮನ್ನಿಸಿ ಇದೊಂದು ಬಾರಿ ಕ್ಷಮೆ ಕೊಡಬೇಕು ಎಂದು ಸಾರ್ವಜನಿಕರ ಎದುರಿನಲ್ಲೇ ಮನವಿ ಮಾಡಿಕೊಂಡ ಗುಡ್ಡೆಹೊಸೂರು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ.ಲತೀಫ್ ಅವರು ಒಬ್ಬ ಜನಪ್ರತಿನಿಧಿಯಾಗಿ ಇಂತಹ ಹೇಯಕೃತ್ಯವನ್ನು ಮಾಡಿದವರ ಪರವಾಗಿ ಮನವಿ ಮಾಡಿಕೊಂಡಿದ್ದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದದ್ದಲ್ಲ,ಇವರು ಒಬ್ಬ ಜನಪ್ರತಿನಿಧಿಯೇ ಹೊರತು,ü ಒಂದು ಸಮುದಾಯದ ಪ್ರತಿನಿಧಿ ಅಲ್ಲ ಎಂಬದನ್ನು ಮನಗಾಣಬೇಕಿತ್ತು. ಜನಪ್ರತಿನಿಧಿಯಾಗಿ ಈ ದೇಶದ ಅಖಂಡತೆಗೆ ಗೌರವ ಕೊಡುವವ ನಾಗಿದ್ದೇನೆ ಎಂದು ತೋರಿಸಲು ಈ ಕೂಡಲೇ ಇವರು ಜಿ.ಪಂ.ಸದಸ್ಯತ್ವಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಯನ್ನು ಕೊಟ್ಟು ದೇಶಪ್ರೇಮವನ್ನು ತೋರಿಸಬೇಕು ಎಂದು ಸೋಮವಾರ ಪೇಟೆ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷ ಪಿ.ಕೆ. ಶೇಷಪ್ಪ, ಯುವ ಮೋರ್ಚಾ ಅಧ್ಯಕ್ಷ ರಂಜಿತ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ, ಮಾಜಿ ನಗರಾಧ್ಯಕ್ಷ ಬಿ.ಕೆ. ಮೋಹನ, ಹಿಂದುಳಿದ ವರ್ಗಗಳ ಅಧ್ಯಕ್ಷ ವಿ.ಕೆ.ರಾಜ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.