ಮಡಿಕೇರಿ, ಜೂ. 24: ಭಾರತ ಚುನಾವಣಾ ಆಯೋಗವು ಪ್ರತಿ ವರ್ಷದಂತೆ ಈ ವರ್ಷವು ಮತದಾರರ ಮತ ವಂಚಿತರಾಗಬಾರದು ಎಂಬ ಧ್ಯೇಯದಡಿ ಅರ್ಹ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ (ಅದರಲ್ಲೂ 18-19 ವರ್ಷದ ಯುವಕರು) ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ 208-ಮಡಿಕೇರಿ ಮತ್ತು 209-ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಾಗರಿಕರು, ಯುವಕರು-ಯುವತಿಯರು ದಿನಾಂಕ 1.1.2017ಕ್ಕೆ 18 ವರ್ಷ ಪೂರ್ಣವಾಗಿದ್ದಲ್ಲಿ ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿರುತ್ತದೆ.

ದಿನಾಂಕ 1.7.2017 ರಿಂದ 31.7.2017ರವರೆಗೆ ಮತಗಟ್ಟೆ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗಳಿಗೆ ಭೇಟಿ ನೀಡಲಿದ್ದು, ಕುಟುಂಬದ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೆ ಇದ್ದಲ್ಲಿ (ನಮೂನೆ-6) ಮತ್ತು ಈಗಾಗಲೇ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ಮತದಾರರು ತಮ್ಮ ಗುರುತಿನ ಚೀಟಿ/ಮತದಾರರ ಪಟ್ಟಿಯಲ್ಲಿನ ನಮೂದುಗಳಲ್ಲಿ ವ್ಯತಿರಿಕ್ತವಾಗಿದ್ದಲ್ಲಿ ಅಥವಾ ತಪ್ಪುಗಳಿದ್ದಲ್ಲಿ ಸರಿಪಡಿಸಲು (ನಮೂನೆ-8) ಮತ್ತು ಸೇರ್ಪಡೆಯಾಗಿರುವ ಮತದಾರರು ಮರಣ, ಸ್ಥಳಾಂತರ, ಒಬ್ಬ ಮತದಾರ ಎರಡು ಬಾರಿ ನೋಂದಣಿಯಾಗಿದ್ದರೆ ಮತ್ತು ಇತರ ಕಾರಣಗಳಿಂದ ಮತದಾರರ ಪಟ್ಟಿಯಿಂದ ಹೆಸರು ತೆಗೆಯಬೇಕಾದಲ್ಲಿ (ನಮೂನೆ-7) ಮತ್ತು ಒಂದೇ ವಿಧಾನ ಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಬಯಸುವವರು (ನಮೂನೆ-8ಎ) ನಿಗಧಿತ ನಮೂನೆಗಳಲ್ಲಿ ಪೂರಕ ದಾಖಲೆಗಳೊಂದಿಗೆ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಲು ಅವಕಾಶವಿರುತ್ತದೆ. ಹಾಗೂ ನಮೂನೆ-6, 7, 8 ಮತ್ತು 8ಎ ಅರ್ಜಿಗಳನ್ನು ಮುಖ್ಯ ಚುನಾವಣಾಧಿಕಾರಿ, ಬೆಂಗಳೂರು ಇವರ ಕಚೇರಿ ವೆಬ್‍ಸೈಟ್ ತಿತಿತಿ.ಛಿeoಞಚಿಡಿಟಿಚಿಣಚಿಞಚಿ.ಞಚಿಡಿ.ಟಿiಛಿ.iಟಿ / ತಿತಿತಿ.ಟಿvsಠಿ.iಟಿ / ತಿತಿತಿ.eಛಿi.ಟಿiಛಿ. iಟಿ ನಲ್ಲಿ ಆನ್-ಲೈನ್ ಮುಖಾಂತರವೂ ಸಹ ಸಲ್ಲಿಸಬಹುದಾಗಿದೆ. ಮತ್ತು ಈ ವೆಬ್ ಸೈಟ್‍ನಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಮಾಹಿತಿಯನ್ನು ನೋಡಬಹು ದಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ತಿಳಿಸಿದ್ದಾರೆ.