ಗೋಣಿಕೊಪ್ಪಲು, ಜೂ. 24: ಪೆÇನ್ನಂಪೇಟೆ ನೂತನ ನ್ಯಾಯಾಲಯ ಸಮುಚ್ಛಯ ನಿರ್ಮಾಣಗೊಂಡಿರುವ ಹಿನ್ನೆಲೆ ಬ್ರಿಟೀಷರ ಕಾಲದ ಇತಿಹಾಸವುಳ್ಳ ನಿರೀಕ್ಷಣಾ ಮಂದಿರವನ್ನು ತೆರವುಗೊಳಿಸಬೇಕಿದ್ದು, ತಾ.23 ರಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರು ಸುಮಾರು 236 ಚದರ ಮೀಟರ್ ಸುತ್ತಳತೆಯ 5 ಕೊಠಡಿಗಳನ್ನೊಳಗೊಂಡ ರೂ.50 ಲಕ್ಷ ವೆಚ್ಚದ ಪರಿವೀಕ್ಷಣಾ ಮಂದಿರಕ್ಕೆ ಭೂಮಿಪೂಜೆ ನೆರವೇರಿಸಿದರು.

ಕಾಮಗಾರಿ ಅವಧಿ ಒಂದು ವರ್ಷವಿದ್ದು, 30/03/2018ಕ್ಕೆ ಪೂರ್ಣಗೊಳಿಸಬೇಕಾಗಿದ್ದು ಮಂಡ್ಯದ ನೃಪತುಂಗ ಎಂಬವರಿಗೆ ಗುತ್ತಿಗೆ ನೀಡಲಾಗಿದೆ. ಇದೇ ಸಂದರ್ಭ ಮಾತನಾಡಿದ ಸಚಿವ ಸೀತಾರಾಮ್ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಂತೆ ರಾಜ್ಯದ ಜನತೆಗೆ ನೀಡಿದ ವಾಗ್ಧಾನವನ್ನು ಬಹುತೇಕ ಪೂರ್ಣಗೊಳಿಸಿದೆ. ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ಚುನಾವಣೆಗೂ ಮುನ್ನ ವಿಶೇಷ ಪ್ಯಾಕೇಜ್‍ನ ನೂರು ಕೋಟಿ ಅನುದಾನವನ್ನು ಕೊಡಗು ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗೆ ವಿನಿಯೋಗಿಸಲಾಗುವದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೆÇನ್ನಪ್ಪ, ಪೆÇನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ, ಜಿ.ಪಂ. ಸದಸ್ಯರಾದ ಶ್ರೀಜಾ ಸಾಜಿ, ಶಿವು ಮಾದಪ್ಪ, ಪಿ.ಆರ್. ಪಂಕಜ, ಮಾಜಿ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ, ತಾ.ಪಂ. ಸದಸ್ಯೆ ಆಶಾ ಪೂಣಚ್ಚ, ಮಾಜಿ ಎಂಎಲ್‍ಸಿ ಅರುಣ್‍ಮಾಚಯ್ಯ, ಹಿರಿಯರಾದ ಪಿ.ಕೆ. ಪೆÇನ್ನಪ್ಪ, ಚೆಕ್ಕೇರ ವಾಸು ಕುಟ್ಟಪ್ಪ, ಮೂಕಳೇರ ಕುಶಾಲಪ್ಪ, ಕೊಲ್ಲೀರ ಬೋಪಣ್ಣ, ಹರೀಶ್, ಸಾಜಿ ಅಚ್ಯುತ್ತನ್,ಪೆÇನ್ನಂಪೇಟೆ ಕಾಂಗ್ರೆಸ್ ಅಧ್ಯಕ್ಷ ಮತ್ರಂಡ ದಿಲ್ಲು, ಗ್ರಾ.ಪಂ. ಸದಸ್ಯರಾದ ಹ್ಯಾರಿಸ್, ಚಂದ್ರಸಿಂಗ್, ಅನೀಸ್, ಆಲೀರ ರಷೀದ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಕೆ.ಎ. ಯಾಕೂಬ್, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ರೆಹಮಾನ್, ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಸರ ಚಂಗಪ್ಪ, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ, ಗೋಣಿಕೊಪ್ಪಲು ಕಾಂಗ್ರೆಸ್ ಪ್ರಮುಖರಾದ ಕಾಡ್ಯಮಾಡ ಚೇತನ್, ಕುಲ್ಲಚಂಡ ಗಣಪತಿ, ಬಿ.ಎನ್. ಪ್ರಕಾಶ್, ವೀರಾಜಪೇಟೆ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಮುರುಗ ಮುಂತಾದವರು ಉಪಸ್ಥಿತರಿದ್ದರು.